ಕರ್ನಾಟಕ ಮಹಿಳಾ ತಂಡಕ್ಕೆ ಸೋಲು ಬೆಂಗಳೂರು: ದಿಟ್ಟ ಆಟವಾಡಿದರೂ ಕರ್ನಾಟಕ ಮಹಿಳಾ ತಂಡವು ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿತು. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 20 ರನ್‌ಗಳಿಂದ ಗೆದ್ದ ಜಾರ್ಖಂಡ್‌ ಸೆಮಿಫೈನಲ್ ಪ್ರವೇಶಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್‌, ರಷ್ಮಿ (76) ಹಾಗೂ ಇಂದ್ರಾಣಿ ರಾಯ್ (86) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಆರು ವಿಕೆಟ್‌ಗೆ 254 ರನ್ ಗಳಿಸಿತು. ಗುರಿ ಬೆನ್ನತ್ತಿದ ಕರ್ನಾಟಕ ತಂಡದ ಪರ ಶುಭಾ ಸತೀಶ್ (68), ದಿವ್ಯಾ ಜಿ.(48) ಹಾಗೂ ವೇದಾ ಕೃಷ್ಣ ಮೂರ್ತಿ (41) ಉತ್ತಮ ಆಟವಾಡಿದರು. ಆದರೂ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ತಂಡ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 234 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಜಾರ್ಖಂಡ್ ತಂಡದ ಅಶ್ವಿನಿ ನಾಲ್ಕು ಹಾಗೂ ನಿಹಾರಿಕಾ ಮೂರು ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರು: ಜಾರ್ಖಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 254 (ರಷ್ಮಿ 76, ಇಂದ್ರಾಣಿ ರಾಯ್‌ 86, ರಿತು 30, ನಿಹಾರಿಕಾ 37; ಆಕಾಂಕ್ಷಾ ಕೊಹ್ಲಿ 52ಕ್ಕೆ 2). ಕರ್ನಾಟಕ: 46 ಓವರ್‌ಗಳಲ್ಲಿ 234ಕ್ಕೆ ಆಲೌಟ್‌ (ಶುಭಾ ಸತೀಶ್‌ 68, ದಿವ್ಯಾ ಜಿ. 48, ವೇದಾ ಕೃಷ್ಣ ಮೂರ್ತಿ 41, ಮೋನಿಕಾ ಸಿ. ಪಟೇಲ್‌ 26; ಅಶ್ವಿನಿ 26ಕ್ಕೆ 4, ನಿಹಾರಿಕಾ 40ಕ್ಕೆ 3). ಫಲಿತಾಂಶ: ಜಾರ್ಖಂಡ್ ತಂಡಕ್ಕೆ 20 ರನ್‌ಗಳ ಜಯ; ಸೆಮಿಫೈನಲ್ ಪ್ರವೇಶ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.