: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಪರಾಭವಗೊಂಡಿತು. ಈ ಮೂಲಕಭಾರತದ ವಿಶ್ವಕಪ್ ಅಭಿಯಾನ ಅಂತ್ಯವಾಯಿತು. ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳ ಜಯ ಸಾಧಿಸಿ ಉಪಾಂತ್ಯ ಪಂದ್ಯಕ್ಕೆ ಲಗ್ಗೆ ಹಾಕಿತು. ಅಂತಿಮ ಓವರ್‌ನ ಕೊನೆಯ ಬಾಲ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 1 ರನ್‌ ಅವಶ್ಯ ಇತ್ತು. ಈ ಹಂತದಲ್ಲಿಮಿಗ್ನಾನ್‌ ಡು ಪ್ರೀಜ್ ಬೌಂಡರಿ ಬಾರಿಸಿ ಆಫ್ರಿಕಾಗೆ ಗೆಲುವಿನ ಸಿಹಿ ಹಂಚಿದರು. #CWC22 ⚡️ ../ufPw44K4Pv ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 274ರನ್‌ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಆಫ್ರಿಕಾ 3 ವಿಕೆಟ್‌ಗಳ ಜಯ ಕಂಡಿತು. ಸಂಕ್ಷಿಪ್ತ ಸ್ಕೋರ್‌... ಭಾರತ: 274/7 (50 ಓವರ್‌) ದಕ್ಷಿಣ ಆಫ್ರಿಕಾ: 275/7 (50 ಓವರ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.