2022: ಹೊಸ ಶಕ್ತಿಯೊಂದಿಗೆ ಐಪಿಎಲ್‌ಗೆ ಮರಳಿದ್ದೇನೆ – ವಿರಾಟ್ ಕೊಹ್ಲಿ ಮುಂಬೈ: ಈ ಬಾರಿಯ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಹೊಸ ಶಕ್ತಿಯೊಂದಿಗೆ ಬಂದಂತೆ ಭಾಸವಾಗುತ್ತಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 2021ರ ಐಪಿಎಲ್ ಟೂರ್ನಿ ಬಳಿಕ ಅವರು ತಂಡದ ನಾಯಕತ್ವ ತೊರೆದಿದ್ದರು. ಪ್ರಸಕ್ತ ಅವಧಿಯ ಟೂರ್ನಿಗಾಗಿ ಅವರು ಸೋಮವಾರ ತಂಡವನ್ನು ಕೂಡಿಕೊಂಡಿದ್ದರು. 2022: ಆರ್‌ಸಿಬಿ ಪೂರ್ವಸಿದ್ಧತಾ ಶಿಬಿರ ಸೇರಿಕೊಂಡ ವಿರಾಟ್ ಕೊಹ್ಲಿ ನಾಯಕತ್ವದ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿರುವುದರಿಂದ ಹೊಸ ಹುರುಪು ಮೂಡಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಲವು ಜವಾಬ್ದಾರಿ ಮತ್ತು ಕರ್ತವ್ಯಗಳಿಂದ ನಿರಾಳನಾಗಿ ಹೊಸ ಶಕ್ತಿ ಪಡೆದಿದ್ದೇನೆ. ಜೀವನವೂ ಉತ್ತಮವಾಗಿ ಸಾಗುತ್ತಿದೆ. ನಮಗೆ ಈಗ ಮಗುವಿದೆ, ಕುಟುಂಬವಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ಮಗುವಿನ ಬೆಳವಣಿಗೆಯನ್ನು ನೋಡಿಕೊಳ್ಳುವುದು, ಕ್ರಿಕೆಟ್ ಆಡುವುದು ಮತ್ತು ಸಂತೋಷದಿಂದ ಜೀವನ ನಡೆಸುವುದು ಮುಖ್ಯ ವಿಚಾರಗಳು ಎಂದು ಹೇಳಿದ್ದಾರೆ. ಫ್ರಾಂಚೈಸ್‌ಗಾಗಿ ಆಡುವ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದೇನೆ. ತಂಡಕ್ಕಾಗಿ ಆಡುವುದನ್ನು ಮತ್ತು ಕ್ರೀಡೆಯನ್ನು ಆಸ್ವಾದಿಸುವುದನ್ನು ಬಯಸುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. | : ಭಾರತ ತಂಡಕ್ಕೆ 110 ರನ್‌ಗಳ ಭರ್ಜರಿ ಜಯ ‘ನನ್ನ ಗಮನ ಯಾವುದರತ್ತ, ನಾನೇನು ಮಾಡಬೇಕು ಎಂಬುದು ನನಗೆ ಸ್ಪಷ್ಟವಾಗಿದೆ. ಆನ್‌ಫೀಲ್ಡ್‌ನಲ್ಲಿ ಆಟವನ್ನು ಆಸ್ವಾದಿಸುವುದರ ಜತೆಗೆ ಹಲವು ವರ್ಷಗಳಿಂದ ನಾನು ಆಡುತ್ತಿರುವ ಈ ಫ್ರಾಂಚೈಸ್‌ಗೆ ಮತ್ತು ತಂಡಕ್ಕೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸುತ್ತೇನೆ. ನಾನೀಗ ಸಿದ್ಧನಾಗಿ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.