ಕ್ರಿಕೆಟ್‌: ನಾಲ್ಕು ರಾಷ್ಟ್ರಗಳ ನಡುವಿನ ಚತುಷ್ಕೋನ ಸರಣಿಗೆ ಹುಬ್ಬಳ್ಳಿಯ ಜಾವೇದ್‌ ಹುಬ್ಬಳ್ಳಿ: ಬಾಂಗ್ಲಾದೇಶದ ಢಾಕಾದಲ್ಲಿ ಮಾ.27ರಿಂದ ನಡೆಯುವ ನಾಲ್ಕು ರಾಷ್ಟ್ರಗಳ ನಡುವಿನ ಚತುಷ್ಕೋನ ಕ್ರಿಕೆಟ್‌ ಸರಣಿಗೆ ಇಲ್ಲಿನ ನೂರಾನಿ ಪ್ಲಾಟ್‌ ನಿವಾಸಿ ಮೊಹಮ್ಮದ್ ಜಾವೇದ್‌ ಆಯ್ಕೆಯಾಗಿದ್ದಾರೆ. ಭಾರತ ದಿವ್ಯಾಂಗ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಡಿಸಿಸಿಬಿ) ಈ ಆಯ್ಕೆ ಮಾಡಿದ್ದು, ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಇಂಗ್ಲೆಂಡ್‌ ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ. ಜಾವೇದ್‌ ಇಲ್ಲಿನ ಕಾರವಾರ ರಸ್ತೆಯಲ್ಲಿ ಎಂ.ಜೆ. ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸಿ ಹೊಸಬರಿಗೆ ತರಬೇತಿ ನೀಡುತ್ತಿದ್ದಾರೆ. ದಿವ್ಯಾಂಗ ಪ್ರೀಮಿಯರ್‌ ಲೀಗ್‌ನಲ್ಲಿ ಮುಂಬೈ ತಂಡದಲ್ಲಿ ಆಡಿದ್ದರು. ‘2019ರಲ್ಲಿ ನೇಪಾಳ ವಿರುದ್ಧ ನಡೆದ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದೆ. ಈಗ ಎರಡನೇ ಬಾರಿಗೆ ಅವಕಾಶ ಲಭಿಸಿದ್ದಕ್ಕೆ ಖುಷಿಯಾಗಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇನೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.