ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಮಿಚೆಲ್‌ಗೆ ಗಾಯ; ಐಪಿಎಲ್‌ಗೆ ಅಲಭ್ಯ? ಲಾಹೋರ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯ, ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಈ ಬಾರಿ ಐಪಿಎಲ್‌ನಲ್ಲಿ ಆಡುವುದು ಸಂದೇಹ. ಆಲ್‌ರೌಂಡರ್ ಮಿಚೆಲ್ ಮಾರ್ಷ್ ಪಾಕಿಸ್ತಾನ ಎದುರಿನ ಆಸ್ಟ್ರೇಲಿಯಾದ ಏಕದಿನ ಸರಣಿಗೆ ಅಭ್ಯಾಸ ಮಾಡುವ ಸಂದರ್ಭದಲ್ಲಿ ಭಾನುವಾರ ಗಾಯಗೊಂಡಿದ್ದರು. ಮಂಗಳವಾರ ಆರಂಭವಾಗಲಿರುವ ಸರಣಿಯಲ್ಲಿ ಆಡುವ ಬಗ್ಗೆ ಇನ್ನೂ ನಿರ್ಧಾರವಾಗಲಿಲ್ಲ. ಹರಾಜಿನಲ್ಲಿ ₹ 6.5 ಕೋಟಿ ಮೊತ್ತ ನೀಡಿ ಮಾರ್ಷ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನತ್ತ ಸೆಳೆದುಕೊಂಡಿತ್ತು. ಏಕದಿನ ಸರಣಿಯ ನಂತರ ಏಪ್ರಿಲ್ ಆರರಂದು ಅವರು ತಂಡವನ್ನು ಸೇರಬೇಕಾಗಿತ್ತು. ಅವರ ಸ್ಕ್ಯಾನಿಂಗ್ ವರದಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು ವರದಿ ಬಂದ ನಂತರ ಸರಣಿಯಲ್ಲಿ ಆಡುಬೇಕೇ ಇಲ್ಲವೇ ಎಂದು ನಿರ್ಧರಿಸಲಾಗುವುದು ಎಂದು ನಾಯಕ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.