2022: ಫಫ್! 7 ಸಿಕ್ಸರ್, 88 ರನ್ - ಇವರೇ ಆರ್‌ಸಿಬಿಯ ಹೊಸ ಎಬಿಡಿ! ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿದ ಫಫ್ ಡುಪ್ಲೆಸಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಚೆನ್ನೈ ತಂಡವು ಐಪಿಎಲ್ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಡುಪ್ಲೆಸಿ ಅವರನ್ನು ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಇದನ್ನೂ ಓದಿ: 2022 : ಡುಪ್ಲೆಸಿ 88, ಕೊಹ್ಲಿ 41*; ಆರ್‌ಸಿಬಿ 205/2 ಅಲ್ಲದೆ ನಿರೀಕ್ಷೆಯಂತೆಯೇ ವಿರಾಟ್ ಕೊಹ್ಲಿ ಅವರಿಂದ ತೆರವಾಗಿರುವ ನಾಯಕ ಸ್ಥಾನದ ಹೊಣೆ ಅವರನ್ನು ಹರಸಿಕೊಂಡು ಬಂದಿತ್ತು. @ 😎 ❓ - ://./LiRFG8lgc7 # # ../LnCpq9HTSt ಆರ್‌ಸಿಬಿ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿರುವ ಫಫ್, ಕೆಂಪು ಜೆರ್ಸಿಯಲ್ಲಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಆರಂಭದಲ್ಲಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದ ಫಫ್, ಬಳಿಕ ಆಕ್ರಮಣಕಾರಿ ಶೈಲಿಯ ಆಟವನ್ನು ಪ್ರದರ್ಶಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದವರೇ ಆದ ಎಬಿ ಡಿವಿಲಿಯರ್ಸ್ ಕೊರತೆಯನ್ನು ನೀಗಿಸಿದರು. ವಿರಾಟ್ ಕೊಹ್ಲಿ ಜೊತೆಗೂ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿರುವ ಫಫ್, ಶತಕದ ಜೊತೆಯಾಟದಲ್ಲಿ (118) ಭಾಗಿಯಾದರು. ಈ ಮೂಲಕ ಆರ್‌ಸಿಬಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಐಪಿಎಲ್‌ನಲ್ಲಿ ಚೊಚ್ಚಲ ಶತಕವನ್ನು ಮಿಸ್ ಮಾಡಿಕೊಂಡರೂ ಡುಪ್ಲೆಸಿ, 3,000 ರನ್‌ಗಳ ಮೈಲಿಗಲ್ಲನ್ನು ಕ್ರಮಿಸಿದರು. ಇವೆಲ್ಲದರ ಮೂಲಕ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಪಾಳಯದಲ್ಲಿ ಭರವಸೆ ಮೂಡಿಸಿದ್ದಾರೆ. 5⃣0⃣ 😍@faf130 🤝 @ - ://./LiRFG8lgc7 # # ../snwGo7pVus 57 ಎಸೆತಗಳನ್ನು ಎದುರಿಸಿದ ಫಫ್ ಮೂರು ಬೌಂಡರಿ ಹಾಗೂ ಏಳು ಅಮೋಘ ಸಿಕ್ಸರ್ ನೆರವಿನಿಂದ 88 ರನ್ ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ವಿರಾಟ್ ಕೊಹ್ಲಿ 41* ಹಾಗೂ ದಿನೇಶ್ ಕಾರ್ತಿಕ್ 32* ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ❤❤😍😍 🔥🔥# # #TataIPL2022 # ../gVNUA4aXRa #IPL2022 # ../KOwA8p3ZjQ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.