2022 : ಸಂಜು ಫಿಫ್ಟಿ, ಹೈದರಾಬಾದ್‌ ಗೆಲುವಿಗೆ 211 ರನ್ ಟಾರ್ಗೆಟ್ ಪುಣೆ: ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್‌ –15ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದೆ. ಸಂಜು ಸ್ಯಾಮ್ಸನ್‌ 55, ದೇವದತ್ತ ಪಡಿಕ್ಕಲ್ 41, ಜೋಸ್ ಬಟ್ಲರ್‌ 35, ಶಿಮ್ರೊನ್ ಹೆಟ್ಮೆಯರ್ 32, ಯಶಸ್ವಿ ಜೈಸ್ವಾಲ್‌ 20, ರಿಯಾನ್ ಪರಾಗ್‌ 12 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಹೈದರಾಬಾದ್ ಪರ ಉಮ್ರಾನ್ ಮಲಿಕ್‌ ಹಾಗೂ ಟಿ. ನಟರಾಜನ್ ತಲಾ 2, ಭುವನೇಶ್ವರ ಕುಮಾರ್‌ ಹಾಗೂ ರೊಮಾರಿಯೊ ಶೆಫ‌ರ್ಡ್‌ ತಲಾ ಒಂದು ವಿಕೆಟ್ ಪಡೆದರು. ! , @ (5⃣5⃣) & - @devdpd07 (4⃣1⃣), @ (3⃣5⃣) & @ (3⃣2⃣) # . 👍 👍 ▶️ ://./GaOK5ulUqE# | # ../ov4T9tw58o ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.