2022| ಧೋನಿಯಷ್ಟೇ ’ಕೂಲ್’ ದಿನೇಶ್ ಕಾರ್ತಿಕ್: ಫಫ್ ಡುಪ್ಲೆಸಿ ನವಿ ಮುಂಬೈ: ವಿಕೆಟ್‌ ಕೀಪರ್ –ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಮಹೇಂದ್ರಸಿಂಗ್ ಧೋನಿ ಅವ ರಂತೆಯೇ ಶಾಂತಚಿತ್ತ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಹೇಳಿದರು. ಬುಧವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಪಂದ್ಯದಲ್ಲಿ ದಿನೇಶ್, ಏಳು ಎಸೆತಗಳಲ್ಲಿ 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ ಏಳು ರನ್ ಬೇಕಾಗಿತ್ತು. ಆ್ಯಂಡ್ರೆ ರಸೆಲ್ಅವರ ಮೊದಲೆರಡು ಎಸೆತಗಳಲ್ಲಿ ದಿನೇಶ್ ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿ ಗಳಿಸಿದ್ದರು. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಫಫ್, ‘ದಿನೇಶ್ ಈ ತಂಡದ ಆಸ್ತಿಯಾಗಿದ್ದಾರೆ. ಅವರ ಅನುಭವ ಮತ್ತು ದೃಢವಾದ ಮನಸ್ಸಿನ ಆಟದಿಂಡ ತಂಡಕ್ಕೆ ಉತ್ತಮ ಫಲ ದೊರೆತಿದೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.