2022: ಪೊಲಾರ್ಡ್, ಗೇಲ್, ಬ್ರಾವೊ ಸಾಲಿಗೆ ರಸೆಲ್ ಮುಂಬೈ: ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ 400 ಟ್ವೆಂಟಿ-20 ಪಂದ್ಯಗಳನ್ನು ಆಡುವ ಮೂಲಕ ಕೀರನ್ ಪೊಲಾರ್ಡ್, ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೊ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರಸೆಲ್, ಬುಧವಾರ ಆರ್‌ಸಿಬಿ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದರು. ಇದನ್ನೂ ಓದಿ: 2022 : ಕೆಕೆಆರ್ 128 ರನ್ನಿಗೆ ಆಲೌಟ್ ಈ ಮೂಲಕ 400 ಅಥವಾ ಅದಕ್ಕಿಂತಲೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಆರನೇ ಹಾಗೂ ವೆಸ್ಟ್‌ ಇಂಡೀಸ್‌ನ ನಾಲ್ಕನೇ ಆಟಗಾರ ಎನಿಸಿದರು. 𝟰𝟬𝟬 𝗧𝟮𝟬 𝗠𝗔𝗧𝗖𝗛𝗘𝗦 𝗙𝗢𝗥 𝗔𝗡𝗗𝗥𝗘 𝗥𝗨𝗦𝗦𝗘𝗟𝗟! ! 🙌# # # #IPL2022 ../1stB8YUbnj ಈ ಪಟ್ಟಿಯಲ್ಲಿ ವಿಂಡೀಸ್‌ನವರೇ ಆದ ಕೀರನ್ ಪೊಲಾರ್ಡ್ (582 ಪಂದ್ಯ) ಮುಂಚೂಣಿಯಲ್ಲಿದ್ದು, ಡ್ವೇನ್ ಬ್ರಾವೊ (523 ಪಂದ್ಯ) ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶೋಯೆಬ್ ಮಲಿಕ್ (472), ವಿಂಡೀಸ್‌ನ ಕ್ರಿಸ್ ಗೇಲ್ (463) ಹಾಗೂ ಇಂಗ್ಲೆಂಡ್‌ನ ರವಿ ಬೋಪಾರ (411) ಕ್ರಮವಾಗಿ ಮೂರು, ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.