ಫಫ್ ಮೇಲಿನ ಅಭಿಮಾನ; ಆರ್‌ಸಿಬಿ ತಂಡವನ್ನು ಬೆಂಬಲಿಸಿದ ಸಿಎಸ್‌ಕೆ ಫ್ಯಾನ್ಸ್ ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ ಅವರನ್ನು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿಸಿತ್ತು. ಅಲ್ಲದೆ ವಿರಾಟ್ ಕೊಹ್ಲಿ ಅವರಿಂದ ತೆರವಾಗಿರುವ ನಾಯಕ ಸ್ಥಾನಕ್ಕೆ ಫಫ್ ಡುಪ್ಲೆಸಿ ಅವರನ್ನು ನೇಮಕಗೊಳಿಸಿತ್ತು. ಇದನ್ನೂ ಓದಿ:ಫಿನಿಶರ್ ದಿನೇಶ್ ಕಾರ್ತಿಕ್ ಧೋನಿಯಷ್ಟೇ 'ಕೂಲ್': ನಾಯಕ ಡುಪ್ಲೆಸಿ ಪ್ರಶಂಸೆ ಆದರೆ ಚೆನ್ನೈ ಅಭಿಮಾನಿಗಳಿಗೆ ಫಫ್ ಡುಪ್ಲೆಸಿ ಮೇಲಿನ ಅಭಿಮಾನ ಅಷ್ಟಿಷ್ಟಲ್ಲ. ಅಲ್ಲದೆ ತಮ್ಮ ಅಚ್ಚು ಮೆಚ್ಚಿನ ಆಟಗಾರನಿಗೆ ಬೆಂಬಲ ಸೂಚಿಸುವ ಸಲುವಾಗಿ ಆರ್‌ಸಿಬಿ ತಂಡವನ್ನು ಬೆಂಬಲಿಸಿದ್ದಾರೆ. ಬುಧವಾರ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಅಭಿಮಾನಿಗಳು ಫಫ್ ಅವರಿಗಾಗಿ ಆರ್‌ಸಿಬಿ ತಂಡವನ್ನು ಬೆಂಬಲಿಸಿದ್ದರು. ಈ ಸಂಬಂಧ ಬ್ಯಾನರ್ ಪ್ರದರ್ಶಿಸಿದ್ದರು. 'ನಾವು ಸಿಎಸ್‌ಕೆ ಅಭಿಮಾನಿಗಳು. ಆದರೆ ಫಫ್ ಅವರಿಗಾಗಿ ಇಲ್ಲಿದ್ದೇವೆ' ಎಂದು ಪ್ರೀತಿಯನ್ನು ಮೆರೆದಿದ್ದಾರೆ. # : " , @faf1307 💛🦁." # | #IPL2022 ../K6wg4oF1Be .# #IPL2022 ../IgZnV4EZ7i ' ' ....🥺😳...# # ../dRNHtGf0T5 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.