ಐಪಿಎಲ್‌ನಲ್ಲಿ ಯಜುವೇಂದ್ರ ಚಾಹಲ್ 150 ವಿಕೆಟ್ ಸಾಧನೆ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 150 ವಿಕೆಟ್‌ ಕಬಳಿಸಿದ ಆರನೇ ಬೌಲರ್ ಎಂಬ ಖ್ಯಾತಿಗೆ ಯಜುವೇಂದ್ರ ಚಾಹಲ್ ಪಾತ್ರರಾಗಿದ್ದಾರೆ. ಐಪಿಎಲ್ 15ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚಾಹಲ್, ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಇದನ್ನೂ ಓದಿ:ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲು - ಅಶ್ವಿನ್ 'ರಿಟೈರ್ಡ್ ಔಟ್' ಅಲ್ಲದೆ ಐಪಿಎಲ್‌ನಲ್ಲಿ ವೇಗದ 150 ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನಿಸಿದ್ದಾರೆ. 118ನೇ ಪಂದ್ಯದಲ್ಲಿ ಚಾಹಲ್ 150 ವಿಕೆಟ್ ಸಾಧನೆ ಮಾಡಿದ್ದಾರೆ. ಲಸಿತ್ ಮಾಲಿಂಗ 105 ಹಾಗೂ ಅಮಿತ್ ಮಿಶ್ರಾ 140ನೇ ಪಂದ್ಯದಲ್ಲಿ 150 ವಿಕೆಟ್ ಗಳಿಸಿದ್ದರು. 150 @ . . . 👑# | # | # | @yuzi_chahal ../twZ9OIOimU ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರ ಪಟ್ಟಿ: ಡ್ವೇನ್ ಬ್ರಾವೊ: 173 ಲಸಿತ್ ಮಾಲಿಂಗ: 170 ಅಮಿತ್ ಮಿಶ್ರಾ: 166 ಪಿಯೂಷ್ ಚಾವ್ಲಾ: 157 ಯಜುವೇಂದ್ರ ಚಾಹಲ್: 150 ಹರಭಜನ್ ಸಿಂಗ್: 150 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.