ವಿರಾಟ್ 71ನೇ ಶತಕದವರೆಗೂ ಡೇಟಿಂಗ್ ಮಾಡುವುದಿಲ್ಲ: ಆರ್‌ಸಿಬಿ ಫ್ಯಾನ್ ಗರ್ಲ್ ಮುಂಬೈ: ವಿರಾಟ್ ಕೊಹ್ಲಿ ಅವರು 71ನೇ ಶತಕದ ಮೈಲಿಗಲ್ಲು ತಲುಪವವರೆಗೂ ತಾನು ಡೇಟಿಂಗ್ ಮಾಡುವುದಿಲ್ಲ ಎಂದು ಆರ್‌ಸಿಬಿಯ ಮಹಿಳಾ ಅಭಿಮಾನಿ ಪೋಸ್ಟರ್ ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ 2022ರಲ್ಲಿ ಶನಿವಾರ ಮುಂಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಈ ದೃಶ್ಯ ಕಂಡುಬಂದಿತು. ಇದನ್ನೂ ಓದಿ: 2022: ಮುಂಬೈ ವಿರುದ್ಧದ ಗೆಲುವಿನ ಬಳಿಕ ಬಯೋಬಬಲ್ ತೊರೆದ ಹರ್ಷಲ್ ಪಟೇಲ್ ಪಂದ್ಯದ ವೇಳೆ ನಾನು ವಿರಾಟ್ ಅವರ 71ನೇ ಶತಕದವರೆಗೆ ಡೇಟಿಂಗ್ ಮಾಡುವುದಿಲ್ಲ ಎಂಬ ಬ್ಯಾನರ್ ಪ್ರದರ್ಶಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ. 😜🥳😂 @ # # # # # #ViratKohli𓃵 ../ ಕ್ರಿಕೆಟ್ ಜಗತ್ತಿನ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರ 71ನೇ ಶತಕದ ನಿರೀಕ್ಷೆಯಲ್ಲಿದ್ದಾರೆ. 2019ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊನೆಯದಾಗಿ ಶತಕ ಬಾರಿಸಿದ್ದರು. ಅಲ್ಲಿಂದೀಚೆಗೆ ಶತಕದ ಬರ ಎದುರಿಸುತ್ತಿದ್ದಾರೆ. ಏತನ್ಮಧ್ಯೆ ಮುಂಬೈ ವಿರುದ್ಧ ಆರ್‌ಸಿಬಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಉಪಯುಕ್ತ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 36 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 48 ರನ್ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.