ಹಾರ್ದಿಕ್ ಪಡೆಗೆ ಹೈದರಾಬಾದ್ ಸವಾಲು ನವಿ ಮುಂಬೈ: ಗೆಲುವಿನ ಹ್ಯಾಟ್ರಿಕ್‌ ಬಾರಿಸಿರುವ ಗುಜರಾತ್ ಟೈಟನ್ಸ್ ತಂಡವು ಐಪಿಎಲ್‌ ಟೂರ್ನಿಯಲ್ಲಿ ಸೋಮವಾರ ಸನ್‌ರೈಸರ್ಸ್‌ ಹೈದರಾಬಾದ್ ಸವಾಲು ಎದುರಿಸಲಿದೆ. ಸತತ ಗೆಲುವುಗಳು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿವೆ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ. ಹೋದ ಪಂದ್ಯದಲ್ಲಿ ಚೆನ್ನೈ ತಂಡದ ಎದುರು ಜಯಿಸಿರುವ ಹೈದರಾಬಾದ್‌ ಉತ್ತಮ ಲಯವನ್ನು ಮುಂದುವರಿಸುವ ಛಲದಲ್ಲಿದೆ. ಗುಜರಾತ್ ತಂಡದ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಪಂಜಾಬ್ ಎದುರಿನ ಪಂದ್ಯದಲ್ಲಿ ಅವರು ವೃತ್ತಿಜೀವನದ ಗರಿಷ್ಠ ಮೊತ್ತ ಗಳಿಸಿದ್ದರು. ಲಾಕಿ ಫರ್ಗ್ಯುಸನ್ ಮತ್ತು ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಹೈದರಾಬಾದ್‌ಗೆ ಸವಾಲಾಗಬಹುದು. ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಮತ್ತು ಅಭಿಷೇಕ್ ಶರ್ಮಾ ಕೂಡ ಮಿಂಚುವ ನಿರೀಕ್ಷೆಯಿದೆ. ಪಂದ್ಯ ಆರಂಭ: ರಾತ್ರಿ 7.30 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಉಭಯ ನಾಯಕರ ಐಪಿಎಲ್ ಸಾಧನೆ ನಾಯಕ;ತಂಡ;ಪಂದ್ಯ;ರನ್;ಗರಿಷ್ಕ;ವಿಕೆಟ್‌;ಅರ್ಧಶತಕ ಹಾರ್ದಿಕ್ ಪಾಂಡ್ಯ;ಗುಜರಾತ್‌;95;1567;91;44;4 ಕೇನ್ ವಿಲಿಯಮ್ಸನ್‌;ಹೈದರಾಬಾದ್‌;66;1935;89;-;17 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.