ಶ್ರೀಲಂಕಾಕ್ಕೆ ಮಣಿದ ಪಾಕಿಸ್ತಾನ; ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಸಮಬಲ ಗಾಲ್: ಪ್ರಭಾತ್ ಜಯಸೂರ್ಯ (117ಕ್ಕೆ5) ಮತ್ತು ರಮೇಶ್ ಮೆಂಡಿಸ್ (101ಕ್ಕೆ4) ಉತ್ತಮ ಬೌಲಿಂಗ್ ಬಲದಿಂದ ಶ್ರೀಲಂಕಾ ತಂಡವು ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್‌ನಲ್ಲಿ ಜಯಿಸಿತು. ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ಪಂದ್ಯದಲ್ಲಿ ಲಂಕಾ ತಂಡವು 246 ರನ್‌ಗಳಿಂದ ಜಯಿಸಿ, 1–1ರಿಂದ ಸರಣಿ ಸಮಬಲ ಮಾಡಿಕೊಂಡಿತು. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್ ಶ್ರೀಲಂಕಾ 378, ಪಾಕಿಸ್ತಾನ: 231 ಎರಡನೇ ಇನಿಂಗ್ಸ್ ಶ್ರೀಲಂಕಾ: 91.5 ಓವರ್‌ಗಳಲ್ಲಿ 8ಕ್ಕೆ360 ಡಿಕ್ಲೇರ್ಡ್ ಪಾಕಿಸ್ತಾನ: 77 ಓವರ್‌ಗಳಲ್ಲಿ 261 (ಬಾಬಾರ್ ಅಜಂ 81, ಯಾಸೀರ್ ಶಾ 27, ನಸೀಮ್ ಶಾ 18, ಪ್ರಭಾತ್ ಜಯಸೂರ್ಯ 117ಕ್ಕೆ5, ರಮೇಶ್ ಮೆಂಡಿಸ್ 101ಕ್ಕೆ4) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 246 ರನ್‌ಗಳಿಂದ ಜಯ. ಸರಣಿ 1–1ರಿಂದ ಸಮ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.