ಬಾಂಗ್ಲಾದೇಶದ ಮುಶ್ಫೀಕರ್ ರಹೀಂ ಟಿ20 ಕ್ರಿಕೆಟ್‌ಗೆ ವಿದಾಯ ಢಾಕಾ: ಬಾಂಗ್ಲಾದೇಶ ತಂಡದ ವಿಕೆಟ್‌ ಕೀಪರ್ ಬ್ಯಾಟರ್‌ ಮುಶ್ಫೀಕರ್ ರಹೀಂ ಅವರು ಭಾನುವಾರ ಟಿ20 ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಏಕದಿನ ಮತ್ತು ಟೆಸ್ಟ್ ಮಾದರಿಗಳಿಗೆ ಹೆಚ್ಚು ಗಮನ ನೀಡಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಅವಕಾಶ ಸಿಕ್ಕರೆ ಫ್ರಾಂಚೈಸ್‌ ಕ್ರಿಕೆಟ್‌‘ನಲ್ಲಿ ಮುಂದುವರಿಯುವುದಾಗಿ 35 ವರ್ಷದ ಮುಶ್ಫೀಕರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವು ಒಂದೂ ಪಂದ್ಯ ಗೆಲ್ಲದೆ ನಿರ್ಗಮಿಸಿದೆ. ತಂಡದ ಮಾಜಿ ನಾಯಕ ಆಗಿರುವಮುಶ್ಫೀಕರ್, 102 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, 115.03ರ ಸರಾಸರಿಯಲ್ಲಿ 1500 ರನ್‌ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.