ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಮಿಂಚಿದ ಕುಲ್‌ದೀಪ್ ಸೇನ್ ಮುಂಬೈ: ಮಧ್ಯ ಪ್ರದೇಶದ ಯುವ ಪ್ರತಿಭಾವಂತ ವೇಗದ ಬೌಲರ್ ಕುಲ್‌ದೀಪ್ ಸೇನ್ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಪರಿಣಾಮಕಾರಿ ಬೌಲಿಂಗ್ ಮಾಡುವಮೂಲಕ ಗಮನ ಸೆಳೆದಿದ್ದಾರೆ. ಭಾನುವಾರ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಮೂರು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಇದನ್ನೂ ಓದಿ:ಐಪಿಎಲ್‌ನಲ್ಲಿ ಯಜುವೇಂದ್ರ ಚಾಹಲ್ 150 ವಿಕೆಟ್ ಸಾಧನೆ ಅಂತಿಮ ಓವರ್‌ನಲ್ಲಿ ಲಖನೌ ಗೆಲುವಿಗೆ 15 ರನ್ನಿನ ಅಗತ್ಯವಿತ್ತು. ಮಾರ್ಕಸ್ ಸ್ಟೋಯಿನಿಸ್ ಹಾಗೂ ಆವೇಶ್ ಖಾನ್ ಕ್ರೀಸಿನಲ್ಲಿದ್ದರು. ̶̶̶̶̶̶̶̶̶̶̶,̶ ̶̶̶̶ , 🎶 ../xilu40PpzS ಮೊದಲ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟ ಕುಲ್‌ದೀಪ್, ನಂತರದ ಮೂರು ಎಸೆತಗಳಲ್ಲಿ ಒಂದೂ ರನ್ ನೀಡದೇ ರಾಜಸ್ಥಾನ್ ಗೆಲುವನ್ನು ಖಚಿತಪಡಿಸಿದರು. ಕೊನೆಯ ಎರಡು ಎಸೆತದಲ್ಲಿ ಸ್ಟೋಯಿನಿಸ್ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಅತಿ ಒತ್ತಡದ ಪರಿಸ್ಥಿತಿಯಲ್ಲೂ ನಿಖರ ಬೌಲಿಂಗ್ ಸಂಘಟಿಸಿದ ಕುಲ್‌ದೀಪ್, ಉಜ್ವಲ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದ್ದಾರೆ. ನಾಲ್ಕು ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟಿದ್ದ ಸೇನ್, ದೀಪಕ್ ಹೂಡಾ ವಿಕೆಟ್ ಪಡೆಯುವ ಮೂಲಕ ಚೊಚ್ಚಲ ಐಪಿಎಲ್ ವಿಕೆಟ್ತಮ್ಮದಾಗಿಸಿದರು. ಭೋಪಾಲದಿಂದ ಸುಮಾರು 450 ಕಿ.ಮೀ. ದೂರದಲ್ಲಿರುವ ರೇವಾ ಮೂಲದ ಈ ವೇಗಿಯನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ₹20 ಲಕ್ಷ ನೀಡಿ ರಾಜಸ್ಥಾನ್ ರಾಯಲ್ಸ್ ತಂಡವು ಖರೀದಿಸಿತ್ತು. 2019ರಲ್ಲಿ ಮುಂಬೈ ವಿರುದ್ಧ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿರುವ ಕುಲ್‌ದೀಪ್, 16 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 44 ವಿಕೆಟ್ ಕಬಳಿಸಿದ್ದಾರೆ. #दिलसेरॉयल 💗 ../j3l5Klv4BY ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.