ದೂರವಾಣಿ ಕ್ರಿಕೆಟರ್ಸ್‌ಗೆ ಪ್ರಶಸ್ತಿ ಬೆಂಗಳೂರು: ದೂರವಾಣಿ ಕ್ರಿಕೆಟರ್ಸ್ (1) ತಂಡವು ಕೆಎಸ್‌ಸಿಎ ಗುಂಪು ಒಂದರಿಂದ ಮೂರನೇ ಡಿವಿಷನ್‌ 14 ವರ್ಷದೊಳಗಿನವರ ಅಂತರ್‌ಕ್ಲಬ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ದೂರವಾಣಿ ಕ್ರಿಕೆಟರ್ಸ್‌ ಒಂದು ವಿಕೆಟ್‌ನಿಂದ ಸರ್‌ ಸಯ್ಯದ್ ಕ್ರಿಕೆಟರ್ಸ್‌ ತಂಡಕ್ಕೆ ಸೋಲುಣಿಸಿತು. ಸಂಕ್ಷಿಪ್ತ ಸ್ಕೋರು: ಸರ್‌ ಸಯ್ಯದ್ ಕ್ರಿಕೆಟರ್ಸ್: 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 184 (ವಿವೇಕ್ ಎನ್‌.ಪಿ. 28, ಪಟೇಲ 26, ಬಾನೇಶ್ ಎಸ್‌.ಪಿ. 38, ಉದಿತ್ ನಂದನ್‌ 25, ದಿಗಂತ್ ಮಾವಿನಕೆರೆ 22; ಹರ್ಷಿತ್ ಪೈ 35ಕ್ಕೆ 2). ದೂರವಾಣಿ ಕ್ರಿಕೆಟರ್ಸ್ (1): 49.3 ಓವರ್‌ಗಳಲ್ಲಿ 9ಕ್ಕೆ 185 (ಶಿವು ಎಂ. 28, ವಿಶ್ವ ಎಚ್‌. 45, ಕುಶಾಲ್‌ ಪಾಸುಪಲೇಟಿ 25, ಗಗನಸಾಯಿ ಕೆ. 27, ಬಾನೇಶ್ ಎಸ್‌.ಪಿ. 24ಕ್ಕೆ2). ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್ (1) ತಂಡಕ್ಕೆ ಒಂದು ವಿಕೆಟ್‌ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.