2022 | ರಾಯಲ್ಸ್ ತಂಡದ ಬಟ್ಲರ್‌ಗೆ ಆರ್‌ಸಿಬಿಯ ಸಿರಾಜ್ ಸವಾಲಾಗಬಲ್ಲರು: ಹಾಗ್ ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿರುವ ರಾಜಸ್ಥಾನ ರಾಯಲ್ಸ್‌ ತಂಡದ ಬ್ಯಾಟರ್‌ ಜೋಸ್ ಬಟ್ಲರ್‌ಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗಿಮೊಹಮ್ಮದ್ ಸಿರಾಜ್ ಸವಾಲೊಡ್ಡಬಲ್ಲರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಹೇಳಿದ್ದಾರೆ. ರಾಜಸ್ಥಾನ ಮತ್ತು ಬೆಂಗಳೂರು ತಂಡಗಳು ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ. ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾತನಾಡಿರುವ ಹಾಗ್, ಬಲಗೈ ಬ್ಯಾಟರ್‌ಗಳಿಗೆ ಸ್ವಿಂಗ್‌ ದಾಳಿ ಸಂಘಟಿಸಬಲ್ಲಆರ್‌ಸಿಬಿಯ ಸಿರಾಜ್‌, ಬಟ್ಲರ್‌ ಎದುರು ಯಶಸ್ಸು ಸಾಧಿಸಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಫೋಟಕ ಬ್ಯಾಟರ್‌ ಎದುರು, ಹರ್ಷಲ್‌ ಪಟೇಲ್‌ ಕೂಡ ಉತ್ತಮ ಆಯ್ಕೆಯಾಗಬಲ್ಲರು ಎಂದೂ ಅವರು ಹೇಳಿದ್ದಾರೆ. 'ಮೊಹಮದ್ ಸಿರಾಜ್, ಬಲಗೈ ಬ್ಯಾಟರ್‌ಗಳತ್ತ ನುಗ್ಗುವಂತೆ, ಮಧ್ಯದ ಮತ್ತು ಲೆಗ್‌ ಸ್ಟಂಪ್‌ ಲೈನ್‌ಮೇಲೆ ದಾಳಿ ಮಾಡಲು ಇಷ್ಟಪಡುತ್ತಾರೆ. ಜೋಸ್ ಬಟ್ಲರ್‌ ಎದುರು ಸಿರಾಜ್ ಅತ್ಯುತ್ತಮ ಹೋರಾಟ ಸಂಘಟಿಸಲಿದ್ದಾರೆ' ಎಂದಿದ್ದಾರೆ. ಹರ್ಷಲ್ ಕುರಿತಂತೆ, 'ಹರ್ಷಲ್ ಪಟೇಲ್ ಪ್ರದರ್ಶನವನ್ನು ಎದುರು ನೋಡುತ್ತಿದ್ದೇನೆ. ನಿಧಾನಗತಿಯ ಎಸೆತಗಳು, ವೇಗದ ಏರಿಳಿತ, ಬೌನ್ಸರ್‌, ಯಾರ್ಕರ್‌ ದಾಳಿಗೆ ಅವರು ಸಜ್ಜಾಗಿದ್ದಾರೆ. ಬ್ಯಾಟರ್‌ಗಳನ್ನು ವಂಚಿಸಬಲ್ಲ ವೇಗಿ ಹರ್ಷಲ್‌. ತಂತ್ರಗಾರಿಕೆ ವಿಚಾರದಲ್ಲಿ ಕೀರನ್‌ ಪೊಲಾರ್ಡ್‌ಗಿಂತಲೂ (ವೆಸ್ಟ್‌ ಇಂಡೀಸ್ ಹಾಗೂ ಮುಂಬೈ ಇಂಡಿಯನ್ಸ್‌ ಆಟಗಾರ) ಸಾಕಷ್ಟು ಮುಂದಿದ್ದಾರೆ' ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 2022 : ರಾಯಲ್ ಚಾಲೆಂಜರ್ಸ್‌ಗೆ ರಾಜಸ್ಥಾನರಾಯಲ್ಸ್ ಸವಾಲು ಮುಂಬೈ ಇಂಡಿಯನ್ಸ್‌ ವಿರುದ್ಧ ಏ.2ರಂದುಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಟ್ಲರ್ (100) ಅಮೋಘ ಶತಕ ಬಾರಿಸಿದ್ದರು. ಅವರ ಆಟದ ಬಲದಿಂದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 193 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಮುಂಬೈ, 170 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.