2022: ಬುಲೆಟ್ ಥ್ರೋ ಮೂಲಕ ಸ್ಟಂಪ್ ಮುರಿದ ಹಾರ್ದಿಕ್ ಪಾಂಡ್ಯ; ಸಂಜು ರನೌಟ್! ಮುಂಬೈ: ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಪಂದ್ಯದ ಎಲ್ಲ ವಿಭಾಗದಲ್ಲೂ ಅಮೋಘ ಪ್ರದರ್ಶನ ನೀಡಿರುವ ನಾಯಕ ಹಾರ್ದಿಕ್ ಪಾಂಡ್ಯ, ಗುರುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ 37 ರನ್ ಅಂತರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೊದಲು ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಪಾಂಡ್ಯ (87*) ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಬಳಿಕ ನಿರ್ಣಾಯಕ ಘಟ್ಟದಲ್ಲಿ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ನೇರ ಥ್ರೋ ಮೂಲಕ ರನೌಟ್ ಮಾಡಿದರು. ಇದನ್ನೂ ಓದಿ: 2022: ಸಚಿನ್ ತೆಂಡೂಲ್ಕರ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್ . #IPL20222 # ../VNcU6uswuT ಹಾರ್ದಿಕ್ ಪಾಂಡ್ಯ ಅವರ ಬುಲೆಟ್ ವೇಗದ ಥ್ರೋಗೆ ಸ್ಟಂಪ್ ಮುರಿಯಿತು. ಇದು ಪಂದ್ಯದ ತಿರುವಿಗೆ ಕಾರಣವಾಯಿತು. ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಜಸ್ಥಾನ್ ಚೇಸಿಂಗ್ ವೇಳೆ ಒಂಟಿ ರನ್ ಕದಿಯಲು ಸಂಜು ಯತ್ನಿಸಿದ್ದರು. ಆದರೆ ಮಿಡ್-ಆಫ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಪಾಂಡ್ಯ ಬುಲೆಟ್ ವೇಗದಲ್ಲಿ ಡೈರೆಕ್ಟ್ ಥ್ರೋ ಮಾಡುವ ಮೂಲಕ ಸ್ಟಂಪ್ ಹಾರಿಸಲು ಯಶಸ್ವಿಯಾದರು. ಇಲ್ಲಿಂದ ಬಳಿಕ ರಾಜಸ್ಥಾನ್ ಚೇತರಿಸಿಕೊಳ್ಳಲೇ ಇಲ್ಲ. ಬೌಲಿಂಗ್‌ನಲ್ಲೂ ಮಿಂಚಿದ ಪಾಂಡ್ಯ, ಒಂದು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.