2022: ಪೊಲಾರ್ಡ್‌ ಕೆಣಕಿದ ಚಾಹರ್ - ವಿಡಿಯೊ ನೋಡಿ ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ಬ್ಯಾಟರ್ ಕೀರನ್ ಪೊಲಾರ್ಡ್‌ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಾಹರ್ ಕೆಣಕಿದ್ದಾರೆ. ಮುಂಬೈ ಚೇಸಿಂಗ್ ವೇಳೆ 16ನೇ ಓವರ್‌ನಲ್ಲಿ ಘಟನೆ ನಡೆದಿತ್ತು. ರಾಹುಲ್ ಚಾಹರ್ ಎಸೆತವನ್ನು ಗ್ರಹಿಸುವಲ್ಲಿ ಪೊಲಾರ್ಡ್ ವಿಫಲರಾಗಿದ್ದರು. ಚೆಂಡು ನೇರವಾಗಿ ಪೊಲಾರ್ಡ್ ಕಾಲಿಗೆ ಬಡಿದಿತ್ತು. ಇದನ್ನೂ ಓದಿ:ಕೊಹ್ಲಿಯಂತೆ ರೋಹಿತ್ ನಾಯಕ ಸ್ಥಾನ ತೊರೆಯುವುದಾಗಿ ಭಾವಿಸಿದ್ದೆ: ಮಂಜ್ರೇಕರ್ ಈ ಸಂದರ್ಭದಲ್ಲಿ ಪೊಲಾರ್ಡ್ ಅವರತ್ತ ದಿಟ್ಟಿಸಿ ನೋಡಿದ ಚಾಹರ್, ಬಾಲ್ ನೋಡಿ ಆಡುವಂತೆ ಸನ್ನೆ ಮಾಡಿದರು. ಈ ವೇಳೆ ಪೊಲಾರ್ಡ್ ಉತ್ತರಿಸುವ ದೃಶ್ಯ ಸೆರೆಯಾಗಿದೆ. ../T0ZTiDZUJ8 ಈ ಹಿಂದೆ ಪೊಲಾರ್ಡ್ ಹಾಗೂ ಚಾಹರ್ ಮುಂಬೈ ತಂಡದ ಪರ ಜೊತೆಯಾಗಿ ಆಡಿದ್ದರು. ಆದರೆ ಈ ಬಾರಿ ಚಾಹರ್, ಪಂಜಾಬ್ ತಂಡದ ತೆಕ್ಕೆಗೆ ಸೇರಿದ್ದರು. ಏತನ್ಮಧ್ಯೆ ಪೊಲಾರ್ಡ್‌ಗೆ ಪಂದ್ಯ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಯಾದವ್ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರನೌಟ್ ಆದರು. ಈ ವೇಳೆ ಬೇಸರಗೊಂಡಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಪೊಲಾರ್ಡ್ ಸಮಾಧಾನಪಡಿಸುತ್ತಿರುವ ದೃಶ್ಯ ಅವರಿಬ್ಬರ ನಡುವಣ ಗೆಳೆತನಕ್ಕೆ ಸಾಕ್ಷಿಯಾಯಿತು. ಇದಕ್ಕೂ ಮೊದಲು ರಾಹುಲ್ ಚಾಹರ್ ಒಂದೇ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದ 18 ವರ್ಷದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್, ಅಬ್ಬರಿಸಿದರು. ಚಾಹರ್ ನಾಲ್ಕು ಓವರ್‌ಗಳಲ್ಲಿ 44 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು. ../CSTTPzFQW5 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.