ಆಸ್ಟ್ರೇಲಿಯಾ ತಂಡದ ಮೇಲೆ ದಾಳಿ ಬೆದರಿಕೆ: ವ್ಯಕ್ತಿ ಬಂಧನ ಲಾಹೋರ್: ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ ಶಂಕಿತನನ್ನು ಲಾಹೋರ್ ಪ್ರಾಂತದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಪಾಕಿಸ್ತಾನ ಪ್ರವಾಸ ಈ ತಿಂಗಳ ಆರಂಭದಲ್ಲಿ ಮುಕ್ತಾಯಗೊಂಡಿತ್ತು. ತಲಾ ಮೂರು ಟೆಸ್ಟ್ ಮತ್ತು ಏಕದಿನ, ಏಕೈಕ ಟ್ವೆಂಟಿ20 ಪಂದ್ಯ ತಂಡ ಆಡಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಆಂತರಿಕ ಸಚಿವಾಲಯಕ್ಕೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತಂಡದ ಮೇಲೆ ಲಾಹೋರ್‌ನಲ್ಲಿ ದಾಳಿ ನಡೆಸುವುದಾಗಿ ಬೆದಿರಿಕೆಯೊಡ್ಡಿದ್ದ. ಈ ಬಗ್ಗೆ ಪಾಕಿಸ್ತಾನದ ಗುಪ್ತಚರ ವಿಭಾಗ ತನಿಖೆ ಆರಂಭಿಸಿತ್ತು. ಇರ್ಫಾನ್ ನಾಸಿರ್ ಎಂಬಾತನನ್ನು ಲಾಹೋರ್‌ನಿಂದ 200 ಕಿಲೋಮೀಟರ್ ದೂರದ ತೋಬಾ ಟೇಕ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮುಭಾಶಿರ್ ಮಾಕೆನ್ ಬಹಿರಂಗ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.