ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಹುಲ್ ಜೊತೆಗಿನ ಚಿತ್ರ ಹಂಚಿದ ನಟಿ ಅಥಿಯಾ ಮುಂಬೈ: 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಯ್‌ಫ್ರೆಂಡ್ ಕೆ.ಎಲ್. ರಾಹುಲ್ ಅವರೊಂದಿಗಿನ ರೊಮ್ಯಾಂಟಿಕ್ ಚಿತ್ರಗಳನ್ನು ನಟಿ ಅಥಿಯಾ ಶೆಟ್ಟಿ ಹಂಚಿದ್ದಾರೆ. 'ಎಲ್ಲೇ ಆದರೂನಿಮ್ಮೊಂದಿಗೆ' ಎಂಬ ಅಡಿಬರಹದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಚಿತ್ರ ಪೋಸ್ಟ್ ಮಾಡಿರುವಅಥಿಯಾ, ರಾಹುಲ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ 'ಲವ್ ಯೂ' ಎಂದು ಕಾಮೆಂಟಿಸಿದ್ದಾರೆ. ಇದನ್ನೂ ಓದಿ: 2022: ಶಿವಂ ದುಬೆ ಮೇಲೆ ಸಿಟ್ಟಾದ ಜಡೇಜ; ಬ್ರಾವೊ ಅಸಮಾಧಾನ (@) ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್, ಇಂಡಿಯನ್ ಪ್ರೀಮಿಯರ್ ಲೀಗ್‌2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹೊಸದಾಗಿ ಪದಾರ್ಪಣೆ ಮಾಡಿರುವ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 100ನೇ ಐಪಿಎಲ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದ ರಾಹುಲ್, ವಿಶೇಷ ಸಾಧನೆ ಮಾಡಿದ್ದರು. ಪ್ರಸ್ತುತ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಾಹುಲ್ ಅವರಿಗೆ ಕ್ರಿಕೆಟ್ ಲೋಕದ ಪ್ರಮುಖರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶಗಳು ಹರಿದು ಬರುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.