2022: 4,6,6,6,6 - ಒಂದೇ ಓವರ್‌ನಲ್ಲಿ 29 ರನ್ ಸಿಡಿಸಿದ 'ಬೇಬಿ ಎಬಿ' ಪುಣೆ: ದಕ್ಷಿಣ ಆಫ್ರಿಕಾದ ಉದಯೋನ್ಮುಖ ಪ್ರತಿಭೆ ಡೆವಾಲ್ಡ್ ಬ್ರೆವಿಸ್, ಐಪಿಎಲ್‌ನಲ್ಲಿಸತತ ನಾಲ್ಕು ಸಿಕ್ಸರ್ ಸೇರಿದಂತೆ ಒಂದೇ ಓವರ್‌‌ನಲ್ಲಿ 29 ರನ್ ಸಿಡಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. 18ರ ಹರೆಯದ ಜೋಹಾನ್ಸ್‌ಬರ್ಗ್ ಮೂಲದ ಈ ಯುವ ಎಡಗೈ ಬ್ಯಾಟರ್ 'ಬೇಬಿ ಎಬಿ' ಎಂದೇ ಖ್ಯಾತಿ ಪಡೆದಿದ್ದಾರೆ. ಬುಧವಾರ ಪುಣೆಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಹುಲ್ ಚಾಹರ್ ದಾಳಿಯಲ್ಲಿ ಮುಂಬೈನ ಈ ಯುವ ಆಲ್‌ರೌಂಡರ್, ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. 4,6,6,6,6 - . ' . , 👇👇://./6gs60F3fWV # # ಇದಕ್ಕೂ ಮೊದಲು ಡ್ರಿಂಕ್ಸ್ ಬ್ರೇಕ್ ವೇಳೆಯಲ್ಲಿ ಮೈದಾನಕ್ಕಿಳಿದಿದ್ದ ಕೋಚ್ ಮಹೇಲಾ ಜಯವರ್ಧನೆ ಹಾಗೂ ಸಚಿನ್ ತೆಂಡೂಲ್ಕರ್ ಅಮೂಲ್ಯ ಸಲಹೆಗಳನ್ನು ನೀಡುತ್ತಿರುವ ದೃಶ್ಯ ಕಂಡುಬಂದಿತು. ಬ್ರೆವಿಸ್ ಕೇವಲ ಒಂದು ರನ್ ಅಂತರದಿಂದ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು. 25 ಎಸೆತಗಳನ್ನು ಎದುರಿಸಿದ ಬ್ರೆವಿಸ್, ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಕೆಲವು ದಿನಗಳ ಹಿಂದೆಯಷ್ಟೇ ಐಪಿಎಲ್‌ನಲ್ಲಿ ತಮ್ಮ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡುವ ಮೂಲಕ ಬ್ರೆವಿಸ್ ಗಮನ ಸೆಳೆದಿದ್ದರು. ಪಂದ್ಯದ ಬಳಿಕ ಈ ಯುವ ಆಟಗಾರನನ್ನು ಭೇಟಿ ಮಾಡಿದ್ದ ಕೊಹ್ಲಿ ಅಭಿನಂದಿಸಿದ್ದರು. " , !" 🙌 & ' ! 💙# # # # @ ../70FnkVJXJ2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.