2022: ರೋಹಿತ್ ಶರ್ಮಾ 10,000 ಟಿ20 ರನ್‌ಗಳ ಸರದಾರ ಮುಂಬೈ: ಐಪಿಎಲ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಸತತ ಐದನೇ ಸೋಲಿಗೆ ಶರಣಾಗಿದೆ. ಆದರೆ ನಾಯಕ ರೋಹಿತ್ ಶರ್ಮಾ ಮಗದೊಂದು ಸಾಧನೆ ಮಾಡಿದ್ದು, ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ 10,000 ರನ್‌ ಗಳಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಇದನ್ನೂ ಓದಿ: 2022: ಗಾಯದ ಮೇಲೆ ಬರೆ; ರೋಹಿತ್ ಶರ್ಮಾಗೆ ₹24 ಲಕ್ಷ ದಂಡ ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ವಿಶ್ವದ ಏಳನೇ ಬ್ಯಾಟರ್ ಎನಿಸಿದ್ದಾರೆ. ಈ ಮೂಲಕ ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕೀರನ್ ಪೊಲಾರ್ಡ್, ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. 1⃣0️⃣,0️⃣0️⃣0️⃣ T20 🔥 7⃣ 😎 1⃣ ℂ𝔸ℙ𝕋𝔸𝕀ℕ ℍ𝕀𝕋𝕄𝔸ℕ 💙# # # # @ImRo45 ../dhvUo1jNWP ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಸರದಾರರ ಪಟ್ಟಿ: 1. ಕ್ರಿಸ್ ಗೇಲ್ (ವೆಸ್ಟ್‌ ಇಂಡೀಸ್): 14,562 2. ಶೋಯೆಬ್ ಮಲಿಕ್ (ಪಾಕಿಸ್ತಾನ): 11,698 3. ಕೀರನ್ ಪೊಲಾರ್ಡ್ (ವೆಸ್ಟ್‌ ಇಂಡೀಸ್): 11,484 4. ಆ್ಯರನ್ ಫಿಂಚ್ (ಆಸ್ಟ್ರೇಲಿಯಾ): 10,499 5. ವಿರಾಟ್ ಕೊಹ್ಲಿ (ಭಾರತ): 10,379 6. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 10,373 7. ರೋಹಿತ್ ಶರ್ಮಾ (ಭಾರತ): 10,003 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.