2022: ಐಪಿಎಲ್‌ನಲ್ಲಿ ನೋ ಬಾಲ್ ವಿವಾದ; ಅಂದು ಧೋನಿ, ಈಗ ಪಂತ್! ಮುಂಬೈ: ಐಪಿಎಲ್‌ನಲ್ಲಿ ನೋ ಬಾಲ್ ವಿವಾದ ಮತ್ತೆ ಕಾಣಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಏಪ್ರಿಲ್ 22, ಶುಕ್ರವಾರ ನಡೆದ ಪಂದ್ಯದಲ್ಲಿ ನಾಟಕೀಯ ಬೆಳವಣಿಗೆ ನಡೆದಿತ್ತು. ಅಂಪೈರ್ ನೋ ಬಾಲ್ ನೀಡದಿರುವುದು ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಕೋಪಕ್ಕೆ ಕಾರಣವಾಗಿತ್ತು. ಈ ಕುರಿತು ವಾದ ಮಾಡಲು ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಮೈದಾನಕ್ಕೆ ಕಳುಹಿಸಿದ್ದರು. ಇದನ್ನೂ ಓದಿ:ನೋ ಬಾಲ್ ವಿವಾದ: ಪಂತ್‌ಗೆ ಶೇ 100ರಷ್ಟು ದಂಡ, ಕೋಚ್‌ ಆಮ್ರೆಗೆ ಒಂದು ಪಂದ್ಯ ನಿಷೇಧ ಇಲ್ಲಿ ಐಪಿಎಲ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪಂತ್ ದಂಡನೆಗೊಳಗಾಗಿದ್ದಾರೆ. ಇನ್ನೊಂದೆಡೆ ಆಮ್ರೆ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಅಂದ ಹಾಗೆ ಐಪಿಎಲ್‌ನಲ್ಲಿ ನೋ ಬಾಲ್ ವಿವಾದ ಸಂಭವಿಸಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ 2019ರಲ್ಲಿ ಅಂಪೈರ್ ತೀರ್ಪಿನಿಂದ ಸಿಟ್ಟಿಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ, ಮೈದಾನಕ್ಕಿಳಿದು ವಾಗ್ವಾದ ನಡೆಸಿದ್ದರು. . 👍🔥🔥# # # # # # ../xOQLAFP8Ai ಅಂದು ಕೂಡ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲೇ ವಿವಾದ ಘಟಿಸಿತ್ತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 18 ರನ್ ಬೇಕಾಗಿತ್ತು. ಧೋನಿ ಹಾಗೂ ರವೀಂದ್ರ ಜಡೇಜ ಕ್ರೀಸಿನಲ್ಲಿದ್ದರು. ಬೆನ್ ಸ್ಟೋಕ್ಸ್ ಓವರ್‌ನ ಮೂರನೇ ಎಸೆತದಲ್ಲಿ ಅರ್ಧಶತಕ ಗಳಿಸಿದ ಧೋನಿ ಔಟಾದರು. ಬಳಿಕ ಕ್ರೀಸಿಗಿಳಿದ ಮಿಚೆಲ್ ಸ್ಯಾಂಟ್ನರ್, ನಾಲ್ಕನೇ ಎಸೆತದಲ್ಲಿ ಎರಡು ರನ್ ಗಳಿಸಿದರು. ಆದರೆ ಈ ವೇಳೆ ನೋ ಬಾಲ್ ವಿವಾದ ನಡೆದಿತ್ತು. ಅಂಪೈರ್ ನೋ ಬಾಲ್ ನೀಡದಿರುವುದು ಧೋನಿ ತಾಳ್ಮೆ ಕಳೆದುಕೊಳ್ಳಲು ಕಾರಣವಾಯಿತು. ಆದರೆ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಸ್ಯಾಂಟ್ನರ್ ಚೆನ್ನೈಗೆ ರೋಚಕ ಗೆಲುವು ತಂದುಕೊಟ್ಟರು. ಅಂದು ಧೋನಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳಲಾಗಿತ್ತು. ಅಲ್ಲದೆ ಪಂದ್ಯ ಶುಲ್ಕದ ಶೇ 50ರಷ್ಟು ದಂಡ ಹೇರಲಾಗಿತ್ತು. ಈಗ ಪಂತ್‌ ಮೇಲೆ ಪಂದ್ಯ ಶುಲ್ಕದ ಶೇ 100ರಷ್ಟು ದಂಡ ವಿಧಿಸಲಾಗಿದೆ. - ! ! .# # # # # ../hCgklrS2Dy ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.