: ಪಂದ್ಯ ಸೋತರೂ ಧೋನಿ ಆಟ ಮೆಚ್ಚಿಕೊಂಡ ರೋಹಿತ್ ಶರ್ಮಾ ಮುಂಬೈ: ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧದ (ಸಿಎಸ್‌ಕೆ) ಗುರುವಾರದ ಪಂದ್ಯದಲ್ಲಿ ಸೋಲನುಭವಿಸಿದ ಹೊರತಾಗಿಯೂ ಎಂಎಸ್ ಧೋನಿ ಆಟವನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ. 13 ಎಸೆತಗಳಲ್ಲಿ 28 ರನ್ ಗಳಿಸಿ ಅಜೇಯರಾಗುಳಿದ ಧೋನಿ ಪಂದ್ಯ ಗೆಲ್ಲಿಸಿಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಪಂದ್ಯದ ಕೊನೆಯ ಹಂತದಲ್ಲಿ ಬ್ಯಾಟ್ ಮಾಡಲು ಬಂದ ಧೋನಿ ಅಂತಿಮ ಓವರ್‌ನಲ್ಲಿ 16 ರನ್‌ಗಳನ್ನು ಗಳಿಸುವ ಮೂಲಕ ಸಿಎಸ್‌ಕೆಗೆ ಗೆಲುವು ತಂದುಕೊಟ್ಟಿದ್ದರು. ‘ಗ್ರೇಟ್‌ ಫಿನಿಷರ್‌’ ಧೋನಿಗೆ ಖ್ಯಾತ ಕ್ರಿಕೆಟಿಗರಿಂದ ಪ್ರಶಂಸೆಯ ಸುರಿಮಳೆ ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್, ‘ನಾವು ಚೆನ್ನಾಗಿ ಹೋರಾಟ ನಡೆಸಿದೆವು. ನಾವು ಸರಿಯಾಗಿ ಆಡುತ್ತಿದ್ದೆವು. ಚೆನ್ನಾಗಿ ಬ್ಯಾಟಿಂಗ್ ಮಾಡದ ಹೊರತಾಗಿಯೂ ಬೌಲರ್‌ಗಳು ಪಂದ್ಯವನ್ನು ನಮ್ಮ ಹಿಡಿತದಲ್ಲೇ ಇರುವಂತೆ ನೋಡಿಕೊಂಡಿದ್ದರು. ಆದರೆ ಕೊನೆಯಲ್ಲಿ ಎಂಸ್ ಧೋನಿ ಫಲಿತಾಂಶವನ್ನು ಬದಲಾಯಿಸಿದರು. ಅವರು ಎಷ್ಟು ಶಾಂತಚಿತ್ತರಾಗಿರುತ್ತಾರೆ, ಪಂದ್ಯವನ್ನು ಹೇಗೆ ಗೆಲ್ಲಿಸಿಕೊಡುತ್ತಾರೆ ಎಂಬುದು ನಮಗೆಲ್ಲ ಗೊತ್ತಿತ್ತು’ ಎಂದು ಹೇಳಿದ್ದಾರೆ. ಧೋನಿ ಅವರ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್‌ಗೆ ಅನೇಕ ಖ್ಯಾತ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ. 2022 : ಧೋನಿ ವೈಭವ, ಚೆನ್ನೈಗೆ ಜಯ, ಮುಂಬೈಗೆ ಸತತ 7ನೇ ಸೋಲು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.