| ವಿರಾಟ್ ಕೊಹ್ಲಿ ಮಿಂಚಿನ ಅರ್ಧಶತಕ; ಪಾಕಿಸ್ತಾನಕ್ಕೆ 182 ರನ್ ಗುರಿ ದುಬೈ:'ರನ್‌ ಯಂತ್ರ' ವಿರಾಟ್‌ ಕೊಹ್ಲಿ ಸಿಡಿಸಿದ ಅಮೋಘಅರ್ಧಶತಕದ ನೆರವಿನಿಂದ ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್ ಗಳಿಸಿದೆ. ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ 'ಸೂಪರ್‌ 4' ಹಂತದಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ನಾಯಕ ರೋಹಿತ್‌ ಶರ್ಮಾ (28) ಮತ್ತು ಕೆ.ಎಲ್‌.ರಾಹುಲ್ (28) ಜೋಡಿ ಮೊದಲ ವಿಕೆಟ್‌ಗೆ ಅರ್ಧಶತಕದ (54 ರನ್) ಆರಂಭ ಒದಗಿಸಿತು. ಆದರೆ ಈ ಇಬ್ಬರೂ ಕೇವಲ ಆರು ರನ್‌ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್‌ ಯಾದವ್‌ (13), ರಿಷಭ್‌ ಪಂತ್‌ (14), ದೀಪಕ್‌ ಹೂಡಾ(16) ಹೆಚ್ಚು ಹೊತ್ತು ನಿಲ್ಲಲಿಲ್ಲ. ಪಾಕ್‌ ವಿರುದ್ಧದ ಕಳೆದ ಪಂದ್ಯದಲ್ಲಿ ಮಿಂಚಿದ್ದಹಾರ್ದಿಕ್‌ ಪಾಂಡ್ಯ ಖಾತೆ ತೆರೆಯಲು ವಿಫಲರಾದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಗಟ್ಟಿಯಾಗಿ ನಿಂತು ಆಡಿದ ಕೊಹ್ಲಿ, ಟಿ20 ಕ್ರಿಕೆಟ್‌ನಲ್ಲಿ ತಮ್ಮ 32ನೇ ಅರ್ಧಶತಕ ಬಾರಿಸಿದರು. 44 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 60 ರನ್‌ ಗಳಿಸಿದ್ದ ಅವರು ಅಂತಿಮ ಓವರ್‌ನಲ್ಲಿ ರನೌಟ್‌ ಆದರು. ಇನಿಂಗ್ಸ್‌ನ ಕೊನೇ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಬಾರಿಸಿದ ರವಿ ಬಿಷ್ಣೋಯಿ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ಪಾಕಿಸ್ತಾನ ಪರ ಶಾದಬ್‌ಖಾನ್‌ ಎರಡು ವಿಕೆಟ್‌ ಪಡೆದರೆ,ನಸೀಂ ಶಾ, ಮೊಹಮ್ಮದ್ ಹಸ್ನೈನ್, ಹ್ಯಾರಿಸ್‌ ರೌಫ್‌, ಮೊಹಮ್ಮದ್ ನವಾಜ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು. 📸📸@ 👌# #AsiaCup2022 ../6aSKHLLA9s ! - @ 👌👌 - ://./xhki2AW6ro # #AsiaCup2022 ../K9gLCdqILm ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.