ಸತತ 8 ಸೋಲು; ಮುಂಬೈ ಅಭಿಮಾನಿಗಳಿಗೆ ರೋಹಿತ್ ಭಾವನಾತ್ಮಕ ಸಂದೇಶ ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಸತತ ಸೋಲಿನಿಂದಾಗಿ ನಿರಾಸೆಗೆ ಒಳಗಾಗಿರುವ ಮುಂಬೈ ಅಭಿಮಾನಿಗಳಿಗೆ ನಾಯಕ ರೋಹಿತ್ ಶರ್ಮಾ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ಈ ಕುರಿತು ರೋಹಿತ್ ಶರ್ಮಾ ಟ್ವೀಟ್ ಮೂಲಕ ಸಂದೇಶ ಹಂಚಿದ್ದಾರೆ. ಇದನ್ನೂ ಓದಿ:ಬೇಜವಾಬ್ದಾರಿಯುತ ಆಟ - ಮುಂಬೈ ಸೋಲಿಗೆ ಬ್ಯಾಟರ್‌ಗಳನ್ನು ದೂಷಿಸಿದ ರೋಹಿತ್ 'ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಮ್ಮ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಇದು ಸಂಭವಿಸುತ್ತದೆ. ಅನೇಕ ದೈತ್ಯ ತಂಡಗಳು ಇಂತಹ ಪರಿಸ್ಥಿತಿಯ ಮೂಲಕ ಹಾದು ಹೋಗಿವೆ. ನಾನು ಈ ತಂಡವನ್ನು ಹಾಗೂ ಇಲ್ಲಿನ ವಾತಾವರಣವನ್ನು ಇಷ್ಟಪಡುತ್ತೇನೆ. ಇಲ್ಲಿಯವರೆಗೆ ಈ ತಂಡದ ಮೇಲೆ ನಂಬಿಕೆ ಹಾಗೂ ನಿಷ್ಠೆಯನ್ನು ತೋರಿರುವ ನಮ್ಮೆಲ್ಲ ಹಿತೈಷಿಗಳಿಗೆ ಕೃತಜ್ಞನಾಗಿದ್ದೇನೆ' ಎಂದು ಹೇಳಿದ್ದಾರೆ. ’ , ’ . ’ 💙@ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಸತತ ಎಂಟು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಆರಂಭಿಕ ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಮೊದಲ ತಂಡವೆಂಬ ಅಪಖ್ಯಾತಿಗೊಳಗಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.