ಮಾಜಿ ಕ್ರಿಕೆಟ್‌ ಆಟಗಾರ ಅರುಣ್‌ ಲಾಲ್‌ಗೆ 66ರಲ್ಲಿ 38ರ ಯುವತಿ ಜೊತೆ 2ನೇ ವಿವಾಹ ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅರುಣ್‌ಲಾಲ್ ಎರಡನೇ ವಿವಾಹಕ್ಕೆ ಸಜ್ಜಾಗಿದ್ದು ‘ಹಲ್ಡಿ’ ಕಾರ್ಯಕ್ರಮದ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಮೇ ಎರಡರಂದು ಮದುವೆಗೆ ಮುಹೂರ್ತ ನಿಶ್ಚಯವಾಗಿದೆ. ಬಹುಕಾಲದ ಗೆಳತಿ, 38 ವರ್ಷದ ಬುಲ್‌ಬುಲ್ ಸಹಾ ಅವರಿಗೆ ತಾಳಿ ಕಟ್ಟಲಿರುವ ಅರುಣ್ ಅವರ ವಯಸ್ಸು ಈಗ 66. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕ್ರಿಕೆಟ್‌ನ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ಅರುಣ್‌ ಲಾಲ್ 2016ರಲ್ಲಿ ಕ್ಯಾನ್ಸರ್‌ಗೆ ಒಳಗಾಗಿದ್ದರು. ಗುಣಮುಖರಾದ ನಂತರ ಬಂಗಾಳ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಮೊದಲ ಪತ್ನಿಯ ಸಮ್ಮತಿಯೊಂದಿಗೆ ಮದುವೆಗೆ ಸಿದ್ಧರಾಗಿದ್ದಾರೆ ಎಂದು ವೆಬ್‌ಸೈಟ್‌ಗಳು ವರದಿ ಮಾಡಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.