ಕ್ರಿಕೆಟ್‌: ಫೈರ್‌ ಏಂಜೆಲ್ಸ್‌ಗೆ ಪ್ರಶಸ್ತಿ ಬೆಂಗಳೂರು: ಫೈರ್ ಏಂಜೆಲ್ಸ್ ತಂಡವು ಪ್ರೆಸ್ಟಿಜೀಯಸ್ ಬಾಗಮನೆ ಟೆಂಪಲ್ ಬಾಲ್‌ (ಪಿಬಿಟಿಬಿ) 9 ಟಿಎಲ್‌ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಇತ್ತೀಚೆಗೆ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫೈರ್ ಏಂಜೆಲ್ಸ್ ನಾಲ್ಕು ವಿಕೆಟ್‌ಗಳಿಂದ ರೇಗಲ್ ಹಾಕ್ಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ರೇಗಲ್ ಹಾಕ್ಸ್ ಆರು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 33 ರನ್‌ ಗಳಿಸಿತು. ಫೈರ್‌ ಎಂಜೆಲ್ಸ್ ಆರು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಜಯದ ಗುರಿ ತಲುಪಿತು. ಪ್ರತಿ ತಂಡದಲ್ಲಿ ಎಂಟು ಆಟಗಾರ್ತಿಯರು ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.