2022 | ಗುಜರಾತ್ ಟೈಟನ್ಸ್ ತಂಡದ 4 ವಿಕೆಟ್ ಕಬಳಿಸಿದ ಕಗಿಸೊ ರಬಾಡ ಬೆಂಗಳೂರು: ಐಪಿಎಲ್‌ 2022 ಟೂರ್ನಿಯ 48ನೇ ಪಂದ್ಯದಲ್ಲಿ ಮಂಗಳವಾರ, ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು, ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತು. ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಇಂದಿನ ಪಂದ್ಯದಲ್ಲಿ, ಗುಜರಾತ್‌ ಟೈಟನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಿವೆ. ಪಂಜಾಬ್ ಕಿಂಗ್ಸ್ ತಂಡದ ಬೌಲರ್ ಕಗಿಸೊ ರಬಾಡ ಅವರು ಈ ಪಂದ್ಯದ ಟಾಪ್ ಪರ್ಫಾಮರ್ ಎನ್ನಿಸಿಕೊಂಡರು. 33 ರನ್ ನೀಡಿ ಕಗಿಸೊ ರಬಾಡ, ಗುಜರಾತ್ ಟೈಟನ್ಸ್ ತಂಡದ 4 ಪ್ರಮುಖ ವಿಕೆಟ್ ಕಬಳಿಸಿದರು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡದ ಒಟ್ಟಾರೆ ಮೊತ್ತ 143ಕ್ಕೆ ಸೀಮಿತವಾಯಿತು. 2022 | : ಪಂಜಾಬ್‌ಗೆ 144 ರನ್ ಗುರಿ ನೀಡಿದ ಗುಜರಾತ್ ಟೈಟನ್ಸ್ - , @KagisoRabada25 . 👇👇 # # ../PUlVPgPOx4 ನಾಲ್ಕು ಓವರ್‌ ಬೌಲಿಂಗ್ ಮಾಡಿದ ಕಗಿಸೊ ರಬಾಡ, ಗುಜರಾತ್ ಟೈಟನ್ಸ್ ತಂಡಕ್ಕೆ ಅತಿ ದುಬಾರಿಯಾಗಿ ಪರಿಣಮಿಸಿದರು. 4/33 👌👌 - ://./SDPD65PWGq # # ../uftxT3OPtB ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಸಾಯಿ ಸುದರ್ಶನ್ 50 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ಏಕೈಕ ಆಸರೆಯಾಗಿ, ತಂಡದ ಮೊತ್ತ 143ಕ್ಕೆ ಏರಿಕೆಯಾಗುವಂತೆ ನೋಡಿಕೊಂಡರು. ! # # 143/8 . - ://./LcfJL3mlUQ # # ../8xyTfsftux ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.