ಗ್ರೇಸ್ ಕ್ರಿಕೆಟ್ ಅಂಕಿ ಸಂಖ್ಯೆ ಪರಿಷ್ಕರಣೆ ಲಂಡನ್: ಕ್ರಿಕೆಟ್ ಇತಿಹಾಸವನ್ನು ದಾಖಲಿಸುವ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ‘ವಿಸ್ಡನ್ ಕ್ರಿಕೆಟರ್ಸ್ ಅಲ್ಮನಾಕ್’ನಲ್ಲಿ ಇಂಗ್ಲೆಂಡ್‌ ದಿಗ್ಗಜ ಆಟಗಾರ ಡಬ್ಲ್ಯು.ಜಿ. ಗ್ರೇಸ್ ಅವರ ಪ್ರಥಮ ದರ್ಜೆ ಅಂಕಿ ಸಂಖ್ಯೆಗಳನ್ನು ಪರಿಷ್ಕರಿಸಿದೆ. ಅವರ ಖಾತೆಯಲ್ಲಿದ್ದ ಎರಡು ಶತಕಗಳನ್ನು ಕಡಿಮೆ ಮಾಡಿದೆ. ಗ್ರೇಸ್ ಅವರು ತಮ್ಮ 100ನೇ ಶತಕವನ್ನು 1895ರ ಮೇ 17ರಂದು ಗಳಿಸಿದ್ದರು ಎಂದು ದಾಖಲಾಗಿತ್ತು. ಗ್ಲೌಸಸ್ಟರ್‌ಶೈರ್‌ ಪರ ಆಡುತ್ತಿದ್ದ ಅವರು ಸೋಮರ್ಸೆಟ್ ವಿರುದ್ಧ ಈ ಶತಕ ಗಳಿಸಿದ್ದರು ಎಂದು ದಾಖಲಿಸಲಾಗಿತ್ತು. ಆದರೆ ಕ್ರಿಕೆಟ್ ಅಂಕಿಅಂಶ ಇತಿಹಾಸಕಾರರ ಸಂಘಟನೆಯವರು ಗ್ರೇಸ್ ಆಡಿದ ಪ್ರಥಮ ದರ್ಜೆ ಪಂದ್ಯಗಳ ಬಗ್ಗೆ ಮಾಹಿತಿ ಕೇಳಿದ ನಂತರ ಬದಲಾವಣೆಗೆ ದಾರಿಯಾಗಿದೆ. ಈಗ ಗ್ರೇಸ್ ಆಡಿದ ಪಂದ್ಯಗಳ ಪಟ್ಟಿಯಿಂದ 10 ಪಂದ್ಯಗಳನ್ನು ತೆಗೆದುಹಾಕಲಾಗಿದ್ದು 54,211 ರನ್‌ಗಳು ಅವರ ದಾಖಲೆಯಲ್ಲಿವೆ. ಈ ವರೆಗೆ54,896 ರನ್‌ಗಳು ಇದ್ದವು.2,876 ವಿಕೆಟ್‌ಗಳ ದಾಖಲೆಯನ್ನು 2,809 ವಿಕೆಟ್‌ಗಳಿಗೆ ಇಳಿಸಲಾಗಿದೆ. 126 ಶತಕಗಳ ಬದಲಿಗೆ 124 ಶತಕಗಳು ಅವರ ಪಟ್ಟಿಯಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.