6,1,6,0,6,6: ರಶೀದ್-ತೇವಾಟಿಯಾ ಲಾಸ್ಟ್ ಓವರ್ ಥ್ರಿಲ್ಲರ್! ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 196 ರನ್ ಗುರಿ ಬೆನ್ನಟ್ಟಿದ್ದ ಗುಜರಾತ್, ಉಮ್ರಾನ್ ಮಲಿಕ್ (25ಕ್ಕೆ 5 ವಿಕೆಟ್) ಮಾರಕ ದಾಳಿಗೆ ಸಿಲುಕಿ 16 ಓವರ್‌ಗಳಲ್ಲಿ 140 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನೂ ಓದಿ:ಉಮ್ರಾನ್ ಮಲಿಕ್ ಚೊಚ್ಚಲ ಐದು ವಿಕೆಟ್ ಸಾಧನೆ; ನಾಲ್ವರು ಕ್ಲೀನ್ ಬೌಲ್ಡ್! ಆದರೆ ಮುರಿಯದ ಆರನೇ ವಿಕೆಟ್‌ಗೆ 24 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ಕಟ್ಟಿದ ರಾಹುಲ್ ತೇವಾಟಿಯಾ ಹಾಗೂ ರಶೀದ್ ಖಾನ್, ಹೈದರಾಬಾದ್ ಕೈಯಿಂದ ಜಯವನ್ನು ಕಸಿದುಕೊಂಡರು. : @gujarat_titans @hardikpandya7 - @rashidkhan_19 @rahultewatia02. 👌 👌 - @28anand 🎥 🔽 # | # ://./ ../4cRVsSYD4U ಮಾರ್ಕೊ ಜಾನ್ಸೆನ್ ಎಸೆದ ಅಂತಿಮ ಓವರ್‌ನಲ್ಲಿ ಗೆಲುವಿಗೆ 22 ರನ್ ಬೇಕಾಗಿತ್ತು. ಮೊದಲ ಎಸೆತವನ್ನು ತೇವಾಟಿಯಾ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತದಲ್ಲಿ ಒಂಟಿ ರನ್ ಗಳಿಸಿದರು. ಬಳಿಕ ಅಂತಿಮ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿದ ರಶೀದ್ ಗುಜರಾತ್‌ಗೆ ರೋಮಾಂಚಕ ಜಯ ಗಳಿಸಿಕೊಟ್ಟರು. ಕೇವಲ 11 ಎಸೆತಗಳನ್ನು ಎದುರಿಸಿದ್ದ ರಶೀದ್ ನಾಲ್ಕು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಔಟಾಗದೆ ಉಳಿದರು. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ರಶೀದ್ 21 ಎಸೆತಗಳಲ್ಲಿ 40 ರನ್ (2 ಬೌಂಡರಿ, 3 ಸಿಕ್ಸರ್) ಗಳಿಸಿ ತಂಡದ ಗೆಲುವಿನಲ್ಲಿ ಅಮೂಲ್ಯ ಕಾಣಿಕೆ ನೀಡಿದ್ದರು. ಈ ಮೂಲಕ ತಾವೊಬ್ಬ ಆಲ್‌ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಇನ್ನೊಂದೆಡೆ ತೇವಾಟಿಯಾ 21 ಎಸೆತಗಳಲ್ಲಿ ಅಜೇಯ 40 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿದರು. ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌‌ಗೆ ಅಟ್ಟಿದ್ದ ತೇವಾಟಿಯಾ ರೋಚಕ ಗೆಲುವು ದಾಖಲಿಸಲು ನೆರವಾಗಿದ್ದರು. . . ! 👌👌 . . ! 👍👍 ' @gujarat_titans # - ! 🙌 🙌 ▶️ ://./r0x3cGZLvS # # ../jCvKNtWN38 - - ’ - - @mihirlee_58 - ://./3QufISYnl5 # ../axJ8kbxkQi #IPL2022: # # ' , # # ../g9zZ5ywpqB ! ?# # # # # # # # # @rashidkhan_19 ../UPPyC4bMiZ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.