2022: ರಶೀದ್ ಸಿಕ್ಸರ್ ಸಿಡಿಸಿದಾಗ ತಾಳ್ಮೆ ಕಳೆದುಕೊಂಡ ಮುರಳೀಧರನ್! ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಬ್ಯಾಟರ್ ರಶೀದ್ ಖಾನ್ ಅಂತಿಮ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿದಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ. ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ ಮುರಳೀಧರನ್ ಸಿಟ್ಟಾಗುವುದು ಅತ್ಯಂತ ವಿರಳವಾಗಿದೆ. ಆದರೆ ಎಸ್‌ಆರ್‌ಎಚ್ ವೇಗಿ ಮಾರ್ಕೊ ಜಾನ್ಸೆನ್ ಕೊನೆಯ ಓವರ್‌ನಲ್ಲಿ 22 ರನ್ ಬಿಟ್ಟುಕೊಟ್ಟಿರುವುದು ಮುರಳೀಧರನ್ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:6,1,6,0,6,6: ರಶೀದ್-ತೇವಾಟಿಯಾ ಲಾಸ್ಟ್ ಓವರ್ ಥ್ರಿಲ್ಲರ್! ' 😡😡😡 ../xIk4NDethi ರಶೀದ್ ಸಿಕ್ಸರ್ ಬಾರಿಸಿದಾಗ ಡಗೌಟ್‌ನಲ್ಲಿದ್ದ ಮುರಳೀಧರನ್, ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಂಟು ವರ್ಷಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ಮಾರ್ಗದರ್ಶಕ ರಾಹುಲ್ ದ್ರಾವಿಡ್ ತಾಳ್ಮೆ ಕಳೆದುಕೊಂಡಿದ್ದರಲ್ಲದೆ ತಮ್ಮ ಕ್ಯಾಪ್ ನೆಲಕ್ಕೆ ಎಸೆದಿದ್ದರು. ಇದಕ್ಕೆ ಸಮಾನವಾಗಿ ಮುರಳೀಧರನ್ ಗರಂ ಆಗಿರುವುದು ಐಪಿಎಲ್‌ನ ರೋಚಕತೆಗೆ ಸಾಕ್ಷಿಯಾಗಿದೆ. ರಶೀದ್ ಖಾನ್ ತಮ್ಮ ಮಾಜಿ ತಂಡಎಸ್‌ಆರ್‌ಎಚ್ ವಿರುದ್ಧವೇ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ' . ../AHp8nFBjBb ../2sEhV2dRMP ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.