ವಿರಾಟ್ ಕೊಹ್ಲಿಗೆ ಅಮೂಲ್ಯ ಸಲಹೆ ಕೊಟ್ಟ ಯುವರಾಜ್ ಸಿಂಗ್ ಮುಂಬೈ: ಸತತ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಮೂಲ್ಯ ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಮತ್ತೊಮ್ಮೆ ಮುಕ್ತ ವ್ಯಕ್ತಿತ್ವವನ್ನು ಮೈಗೂಡಿಸಬೇಕಿದೆ. ಅವರು ತಮ್ಮನ್ನು ತಾನೇ ಬದಲಾಯಿಸಿಕೊಂಡರೆ ಹಾಗೂ ಮೊದಲಿನಂತೆಯೇ ಇರಲು ಸಾಧ್ಯವಾದರೆ ಆಟದಲ್ಲೂ ಪ್ರತಿಫಲಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 2022: ರಶೀದ್ ಸಿಕ್ಸರ್ ಸಿಡಿಸಿದಾಗ ತಾಳ್ಮೆ ಕಳೆದುಕೊಂಡ ಮುರಳೀಧರನ್! ಈ ಯುಗದ ಅತ್ಯುತ್ತಮ ಆಟಗಾರ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತು ಮಾಡಿದ್ದಾರೆ. ಅಲ್ಲದೆ ಕಠಿಣ ಪರಿಶ್ರಮದಲ್ಲಿ ವಿಶ್ವಾಸವನ್ನಿರಿಸಿಕೊಂಡಿದ್ದಾರೆ. ಇದರಿಂದ ಕಳೆದ ಹಲವಾರು ವರ್ಷಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ ಎಂದು ಯುವಿ ಉಲ್ಲೇಖಿಸಿದರು. ವಿರಾಟ್ ರನ್ ಹೊಳೆಯನ್ನೇ ಹರಿಸುವುದನ್ನು ನಾವು ನೋಡಿದ್ದೇವೆ. ಆದರೆ ಎಲ್ಲ ಶ್ರೇಷ್ಠ ಆಟಗಾರರಂತೆಯೇ ಕಠಿಣ ಪರಿಸ್ಥಿತಿಯಿಂದ ಹಾದು ಹೋಗುತ್ತಿದ್ದಾರೆ. ಇದು ವಿರಾಟ್ ಹಾಗೂ ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.