12 ಪಂದ್ಯಗಳಲ್ಲಿ 11ನೇ ಬಾರಿ ಟಾಸ್ ಸೋತ ರಾಜಸ್ಥಾನ್ ಕ್ಯಾಪ್ಟನ್ ಸಂಜು ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಇದುವರೆಗಿನ 12 ಪಂದ್ಯಗಳ ಪೈಕಿ 11ನೇ ಬಾರಿಗೆ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. 'ಇಎಸ್‌ಪಿಎನ್ ಕ್ರಿಕ್‌ಇನ್ಫೋ' ಮಾಹಿತಿ ಪ್ರಕಾರ 2012ರಲ್ಲಿ ಮಹೇಂದ್ರ ಸಿಂಗ್ ಧೋನಿ 12 ಸಲ ಟಾಸ್ ಸೋತಿದ್ದರು. ಹಾಗೆಯೇ 2008ರಲ್ಲಿ ಧೋನಿ ಹಾಗೂ 2013ರಲ್ಲಿ ವಿರಾಟ್ ಕೊಹ್ಲಿ ತಲಾ 11 ಬಾರಿ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದರು. ಈಗ ಸಂಜು ಸ್ಯಾಮ್ಸನ್ 11 ಬಾರಿ ಟಾಸ್ ಸೋತಿದ್ದಾರೆ. ಇದನ್ನೂ ಓದಿ:ಮುಂದಿನ ವರ್ಷ ಎಬಿ ಡಿವಿಲಿಯರ್ಸ್ ಆರ್‌ಸಿಬಿಗೆ ವಾಪಸ್? ಕೊಹ್ಲಿ ಹೇಳಿದ್ದೇನು? ಹಾಗಿದ್ದರೂ ಟಾಸ್ ಸೋಲು ಸಂಜು ನಾಯಕತ್ವದ ರಾಜಸ್ಥಾನ್ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಟಾಸ್ ಸೋತ 11 ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಏ. 14ರಂದು ಗುಜರಾತ್ ಟೈಟನ್ಸ್ ವಿರುದ್ಧ ಟಾಸ್ ಗೆದ್ದರೂ ಪಂದ್ಯ ಗೆಲ್ಲಲು ಸಾಧ್ಯವಾಗಿರಲಿಲ್ಲ. # # - ://./EA3RTz0tWQ # # ../ ಸಂಜು ಸ್ಯಾಮ್ಸನ್ ಟಾಸ್ ಸೋಲು/ಫಲಿತಾಂಶಗಳ ಪಟ್ಟಿ ಇಂತಿವೆ: ಹೈದರಾಬಾದ್ ವಿರುದ್ಧ: ಟಾಸ್ ಸೋಲು, ಫಲಿತಾಂಶ: 61 ರನ್ ಅಂತರದ ಜಯ ಮುಂಬೈ ಇಂಡಿಯನ್ಸ್ ವಿರುದ್ಧ: ಟಾಸ್ ಸೋಲು, ಫಲಿತಾಂಶ: 23 ರನ್ ಅಂತರದ ಜಯ ಆರ್‌ಸಿಬಿ ವಿರುದ್ಧ: ಟಾಸ್ ಸೋಲು, ಫಲಿತಾಂಶ: 4 ವಿಕೆಟ್ ಅಂತರದ ಸೋಲು ಲಖನೌ ವಿರುದ್ಧ: ಟಾಸ್ ಸೋಲು, ಫಲಿತಾಂಶ: 3 ರನ್ ಅಂತರದ ಜಯ ಗುಜರಾತ್ ವಿರುದ್ಧ: ಟಾಸ್ ಗೆಲುವು, ಫಲಿತಾಂಶ: 37 ರನ್ ಅಂತರದ ಸೋಲು ಕೋಲ್ಕತ್ತ ವಿರುದ್ಧ: ಟಾಸ್ ಸೋಲು, ಫಲಿತಾಂಶ: 7 ರನ್ ಅಂತರದ ಜಯ ಡೆಲ್ಲಿ ವಿರುದ್ಧ: ಟಾಸ್ ಸೋಲು, ಫಲಿತಾಂಶ: 15 ರನ್ ಅಂತರದ ಜಯ ಆರ್‌ಸಿಬಿ ವಿರುದ್ಧ: ಟಾಸ್ ಸೋಲು, ಫಲಿತಾಂಶ: 29 ರನ್ ಅಂತರದ ಜಯ ಮುಂಬೈ ವಿರುದ್ಧ: ಟಾಸ್ ಸೋಲು, ಫಲಿತಾಂಶ: 5 ವಿಕೆಟ್ ಅಂತರದ ಸೋಲು ಕೋಲ್ಕತ್ತ ವಿರುದ್ಧ: ಟಾಸ್ ಸೋಲು, ಫಲಿತಾಂಶ: 7 ವಿಕೆಟ್ ಅಂತರದ ಸೋಲು ಪಂಜಾಬ್ ವಿರುದ್ಧ: ಟಾಸ್ ಸೋಲು, ಫಲಿತಾಂಶ: 6 ವಿಕೆಟ್ ಅಂತರದ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.