2022: ಅದ್ಭುತ ಕ್ಯಾಚ್ ಹಿಡಿದ ಸೂಪರ್‌ಮ್ಯಾನ್ ಬಟ್ಲರ್ ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿಯುವ ಮೂಲಕ ಬಟ್ಲರ್ ಮೋಡಿ ಮಾಡಿದರು. ಇದನ್ನೂ ಓದಿ:ಅಶಿಸ್ತು ತೋರಿದ್ದ ವಾರ್ನರ್‌ ಅವರನ್ನು ತಂಡದಿಂದ ಹೊರಗಟ್ಟಲಾಗಿತ್ತು: ಸೆಹ್ವಾಗ್ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಈ ವೇಳೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಶಿಖರ್ ಧವನ್ ಹೊಡೆದ ಚೆಂಡನ್ನು ಮಿಡ್-ಆನ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಬಟ್ಲರ್ ಮೇಲಕ್ಕೆ ಹಾರಿ ಕ್ಯಾಚ್ ಹಿಡಿದರು. ಪರಿಣಾಮ 12 ರನ್ ಗಳಿಸಿದ್ದ ಧವನ್ ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು. 😈 ' 😍😍# # ../0eYGtjr8pY ಇದೇ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರು ಹಿಡಿದಿರುವ ಕ್ಯಾಚ್‌ಗೆ ಹೋಲುವ ರೀತಿಯಲ್ಲಿ ಬಟ್ಲರ್ ಕ್ಯಾಚ್ ಹಿಡಿದಿದ್ದಾರೆ ಎಂದು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಮುನ್ನಡೆಯಲ್ಲಿರುವ ಬಟ್ಲರ್, ಇದುವರೆಗೆ 10 ಪಂದ್ಯಗಳಲ್ಲಿ 65.33ರ ಸರಾಸರಿಯಲ್ಲಿ 588 ರನ್ ಗಳಿಸಿದ್ದಾರೆ. . . ! 👏 👏 @! 👌 👌@ashwinravi99 . 👍 👍# 1 . ▶️ ://./Oj5tAfX0LP # | # ../zjiRfYXfd4 ? 🤔# #IPL2022 # # # # # ../YY5JfusLNZ 🤯💥💥 !! # ../3XsckvKb3t ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.