ಸಿಕ್ಸ್‌ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ ಬೆಂಗಳೂರು: ಸಿಕ್ಸ್ ಕ್ರಿಕೆಟ್ ಅಕಾಡೆಮಿಯು ಟೈಗರ್ ಕಪ್ 12 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಇಲ್ಲಿಯ ಗ್ಲೋಬಲ್ ತಾಂತ್ರಿಕ ಅಕಾಡೆಮಿ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಿಕ್ಸ್ ಅಕಾಡೆಮಿ ಏಳು ವಿಕೆಟ್‌ಗಳಿಂದ ಪ್ಯಾಂಥರ್ಸ್‌ ಕ್ರಿಕೆಟ್ ಅಕಾಡೆಮಿ ತಂಡವನ್ನು ಸೋಲಿಸಿತು. ಸಂಕ್ಷಿಪ್ತ ಸ್ಕೋರು: ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿ: 30 ಓವರ್‌ಗಳಲ್ಲಿ 9ಕ್ಕೆ 120 (ಪವನ್‌ದೀಪ್ ಭರದಖಾನೆ 49; ಹೃತಿಕ್ ಕುಮಾರ್ 5ಕ್ಕೆ 2). ಸಿಕ್ಸ್ ಅಕಾಡೆಮಿ: 16.4 ಓವರ್‌ಗಳಲ್ಲಿ 3ಕ್ಕೆ 121 (ಸಿದ್ಧಾಂತ್ ಶ್ರೀಕಾಂತ್‌ 24). ಫಲಿತಾಂಶ: ಸಿಕ್ಸ್ ಅಕಾಡೆಮಿಗೆ ಏಳು ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.