ಕೆಕೆಆರ್‌ ವೇಗಿ ಪ್ಯಾಟ್ ಕಮಿನ್ಸ್‌ಗೆ ಗಾಯ; ಐಪಿಎಲ್‌ನಿಂದ ಹೊರಕ್ಕೆ ಮೆಲ್ಬರ್ನ್: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗಿ ಪ್ಯಾಟ್ ಕಮಿನ್ಸ್ ಪೃಷ್ಠದ ಗಾಯದಿಂದ ಬಳಲುತ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕರೂ ಆಗಿರುವ ಕಮಿನ್ಸ್, ತವರಿಗೆ ಮರಳುವರು ಎಂದು ಕ್ರಿಕೆಟ್ ಡಾಟ್‌ ಕಾಮ್ ಡಾಟ್ ಎಯು ವರದಿ ಮಾಡಿದೆ.ಮೆಗಾ ಹರಾಜಿನಲ್ಲಿ ಕೋಲ್ಕತ್ತ ತಂಡ ಕಮಿನ್ಸ್ ಅವರನ್ನು ₹ 7.25 ಕೋಟಿಗೆ ಖರೀದಿಸಿತ್ತು. ಎರಡು ವಾರಗಳಲ್ಲಿ ಗಾಯದಿಂದ ಚೇತರಿಸಿಕೊಳ್ಳುವರು ಎಂದು ಮೂಲಗಳು ತಿಳಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.