2022: ಜಡೇಜ ಅವರನ್ನು ಅನ್‌ಫಾಲೋ ಮಾಡಿದ ಚೆನ್ನೈ ಫ್ರಾಂಚೈಸ್: ವರದಿ ಮುಂಬೈ: ಆರ್‌ರೌಂಡರ್ ರವೀಂದ್ರ ಜಡೇಜ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್, ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದೆ ಎಂದು ವರದಿಯಾಗಿದೆ. ಇದರೊಂದಿಗೆ ಚೆನ್ನೈ ಹಾಗೂ ಜಡೇಜ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿ ಹಬ್ಬಿದೆ. ಇದನ್ನೂ ಓದಿ:ತಮಿಳು ಚಿತ್ರ ನಿರ್ಮಿಸಲಿರುವ ಧೋನಿ; ಪ್ರಮುಖ ಪಾತ್ರದಲ್ಲಿ ನಯನತಾರಾ? ಕಳೆದ 10 ವರ್ಷಗಳಿಂದ ಚೆನ್ನೈ ತಂಡದ ಭಾಗವಾಗಿರುವ ಜಡೇಜ ಅವರಿಗೆ ಟೂರ್ನಿ ಆರಂಭಕ್ಕೂ ಎರಡು ದಿನಗಳ ಮೊದಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಆದರೆ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟೂರ್ನಿ ಮಧ್ಯೆ ನಾಯಕ ಸ್ಥಾನಕ್ಕೆ ಜಡೇಜ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಮತ್ತೆ ಧೋನಿ ನಾಯಕ ಪಟ್ಟಕ್ಕೇರಿದ್ದರು. ಈ ನಡುವೆ ಗಾಯದ ಸಮಸ್ಯೆಗೆ ಒಳಗಾಗಿರುವ ಜಡೇಜ, ಟೂರ್ನಿಯ ಉಳಿದಿರುವ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದನ್ನೂ ಓದಿ:ಕೆ.ಎಲ್‌.ರಾಹುಲ್ -ಅತಿಯಾ ಶೆಟ್ಟಿ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.