: ಕ್ರಿಕೆಟ್ ಅಥವಾ ಹಾಕಿ ? ಅಶ್ವಿನ್ ಬ್ಯಾಟಿಂಗ್ ಶೈಲಿಗೆ ನೆಟ್ಟಿಗರಿಂದ ಟ್ರೋಲ್ ಮುಂಬೈ: ಪ್ರತಿಯೊಬ್ಬ ಬ್ಯಾಟರ್ ತಮ್ಮದೇ ಆದ ಬ್ಯಾಟಿಂಗ್ ಶೈಲಿ ಹೊಂದಿರುತ್ತಾರೆ. ರಾಹುಲ್ ದ್ರಾವಿಡ್ ಅವರಂತಹ ಸ್ಟೈಲಿಷ್ ಕ್ರಿಕೆಟಿಗರನ್ನು ನಾವು ಕಂಡಿದ್ದೇವೆ. ಹಾಗಿರಬೇಕೆಂದರೆ ಈಗ ಐಪಿಎಲ್ಟೂರ್ನಿಯಲ್ಲಿ ವಿಚಿತ್ರ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ರವಿಚಂದ್ರನ್ ಅಶ್ವಿನ್ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: 2022: ಜಡೇಜ ಅವರನ್ನು ಅನ್‌ಫಾಲೋ ಮಾಡಿದ ಚೆನ್ನೈ ಫ್ರಾಂಚೈಸ್: ವರದಿ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಶ್ವಿನ್, ವಿಚಿತ್ರ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತು ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇದು ಹಾಕಿ ಅಥವಾ ಕ್ರಿಕೆಟ್ ? ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. . ../pwbCTe7j31 ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಶ್ವಿನ್, ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದ್ದರು. ಈ ಮೂಲಕ ಬ್ಯಾಟಿಂಗ್‌ನಲ್ಲೂ ಸಾಮರ್ಥ್ಯ ಮೆರೆದಿದ್ದಾರೆ. 38 ಎಸೆತಗಳನ್ನು ಎದುರಿಸಿದ ಅಶ್ವಿನ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಆದರೂ ಅಶ್ವಿನ್ ಹೋರಾಟ ವ್ಯರ್ಥವೆನಿಸಿತು. ರಾಜಸ್ಥಾನ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ! 50 . 🔥 ../vrBIJEDI8r ' :- ../gAAs44TVOj . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.