2022: ಜಡೇಜ ಸ್ಥಾನ ತುಂಬಲು ಸಾಧ್ಯವಿಲ್ಲ: ಧೋನಿ ಮುಂಬೈ: ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಐಪಿಎಲ್ 2022ನೇ ಟೂರ್ನಿಯಲ್ಲಿ ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ವೇಳೆಯಲ್ಲಿ ಧೋನಿ ಈ ಕುರಿತು ಪ್ರತಿಕ್ರಿಯಿಸಿದರು. ಇದನ್ನೂ ಓದಿ:ಸ್ಟೇಡಿಯಂನಲ್ಲಿ ಪವರ್‌ಕಟ್; ಡಿಆರ್‌ಎಸ್ ಅಲಭ್ಯ; ಕಾನ್ವೆ ಔಟ್ ಅಥವಾ ನಾಟೌಟ್? 'ಜಡೇಜ ಅವರಂತಹ ಆಲ್‌ರೌಂಡರ್ ಆಟಗಾರರು ವಿಭಿನ್ನ ರೀತಿಯ ಸಂಯೋಜನೆಯೊಂದಿಗೆ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತಾರೆ. ಅವರ ಸ್ಥಾನ ತುಂಬುವುದು ಕಷ್ಟ' ಎಂದು ಹೇಳಿದ್ದಾರೆ. 'ಜಡೇಜ ಅವರಿಗಿಂತ ಉತ್ತಮವಾಗಿಬೇರೆ ಯಾರಿಗಾದರೂಫೀಲ್ಡಿಂಗ್ ಮಾಡಲು ಸಾಧ್ಯವಾಗಬಹುದು ಎಂದು ನಾನು ಭಾವಿಸುವುದಿಲ್ಲ. ಈ ನಿಟ್ಟಿನಲ್ಲಿ ಜಡೇಜ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಗಾಯಾಳು ರವೀಂದ್ರ ಜಡೇಜ ಐಪಿಎಲ್‌ನಲ್ಲಿ ಉಳಿದಿರುವ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.