ಭಾರತ ಪ್ರವಾಸ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಸ್ಟಬ್ಸ್ ಜೋಹಾನ್ಸ್‌ಬರ್ಗ್ (ಪಿಟಿಐ): ಮುಂದಿನ ತಿಂಗಳು ಭಾರತ ಪ್ರವಾಸ ಮಾಡಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಮಂಗಳವಾರ ಆಯ್ಕೆ ಮಾಡಲಾಗಿದ್ದು, ತೆಂಬಾ ಬವುಮಾ ನಾಯಕತ್ವ ವಹಿಸುವರು. ಯುವ ಆಟಗಾರ ಟ್ರೈಸ್ಟನ್ ಸ್ಟಬ್ಸ್‌ ಸ್ಥಾನ ಪಡೆದಿದ್ದಾರೆ. ತೆಂಬಾ ಬವುಮಾ ನಾಯಕತ್ವದ 16 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಟಿ20 ಚಾಲೆಂಜರ್ಸ್‌ ಟೂರ್ನಿಯಲ್ಲಿ ಜಿಬೆಟ್ಸ್‌ ವಾರಿಯರ್ಸ್‌ ತಂಡದಲ್ಲಿ ಮಿಂಚಿದ್ದ 21 ವರ್ಷದ ಸ್ಟಬ್ಸ್‌ ಸ್ಥಾನ ಗಳಿಸಿದ್ದಾರೆ.ಅವರು ಆ ಟೂರ್ನಿಯಲ್ಲಿ ಏಳು ಪಂದ್ಯಗಳಿಂದ 293 ರನ್ ಗಳಿಸಿದ್ದರು. 183.12ರ ಸ್ಟ್ರೈಕ್‌ರೇಟ್‌ನಲ್ಲಿ ಆಡಿದ್ದರು. ಜೂನ್ 9ರಿಂದ ಟಿ20 ಸರಣಿಯು ಆರಂಭವಾಗಲಿದೆ. ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಕಟಕ್ (ಜೂ12), ವಿಶಾಖಪಟ್ಟಣ (ಜೂ 14), ರಾಜ್‌ಕೋಟ್ (ಜೂ 17) ಮತ್ತು ಬೆಂಗಳೂರು (ಜೂ 19) ನಗರಗಳಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ತಂಡ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ರೀಝಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ ಮಹಾರಾಜ, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ಟ್ರೈಸ್ಟನ್ ಸ್ಟಬ್ಸ್, ರಸಿ ವ್ಯಾನ್ ಡರ್ ಡಸೆ, ಮಾರ್ಕೊ ಜಾನ್ಸೆನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.