2022: ವಿಕೆಟ್‌‌ನ ಅಂಚಿಗೆ ತಾಗಿದ ಚೆಂಡು; ಆದರೂ ಬೇಲ್ಸ್ ಹಾರಲಿಲ್ಲ! ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್, ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿದೆ. ಮಿಚೆಲ್ ಮಾರ್ಷ್ (89) ಹಾಗೂ ಡೇವಿಡ್ ವಾರ್ನರ್ (52*) ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಡೆಲ್ಲಿ ಗೆಲುವಿನ ರೂವಾರಿ ಎನಿಸಿದ್ದಾರೆ. ಈ ನಡುವೆ ವಾರ್ನರ್‌ಗೆ ಅದೃಷ್ಟದ ಸಾಥ್ ದೊರಕಿತ್ತು. ರಾಜಸ್ಥಾನ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎಸೆದ ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನ ಅಂತಿಮ ಎಸೆತವು ವಿಕೆಟ್‌ನ ಅಂಚಿಗೆ ಬಡಿಯಿತು. ಆದರೂ ಬೇಲ್ಸ್ ಹಾರಲಿಲ್ಲ. ' ! .# # # #IPL2022 # # # # ../0HC0KJL8xN ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ವಿಕೆಟ್‌ಗೆ ತಾಗಿರುವುದು ಸ್ಪಷ್ಟವಾಗಿತ್ತು. ಆದರೆ ಬೇಲ್ಸ್ ಬೀಳದಿರುವುದರಿಂದ ಔಟ್ ಆಗಲಿಲ್ಲ. ಇದರಿಂದ ರಾಜಸ್ಥಾನ್ ತಂಡವು ಹಿನ್ನಡೆಗೊಳಗಾಯಿತು. ಇದರ ಸಂಪೂರ್ಣ ಲಾಭ ಪಡೆದ ವಾರ್ನರ್, ಎರಡನೇ ವಿಕೆಟ್‌ಗೆ ಮಾರ್ಷ್ ಜೊತೆಗೆ ಶತಕದ ಜೊತೆಯಾಟ ಕಟ್ಟಿದ್ದರಲ್ಲದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ... # 🤣🤣🤣🤣# # # # #TATAIPL2022 ../QSoJYE8tq2 ../x2XIQ8k97h ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.