ಐಪಿಎಲ್‌ನಲ್ಲಿ ಸತತ 5ನೇ ಆವೃತ್ತಿಯಲ್ಲಿ ರಾಹುಲ್ 500 ರನ್ ಸಾಧನೆ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್, ಸತತ ಐದನೇ ಆವೃತ್ತಿಯಲ್ಲೂ 500ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಐಪಿಎಲ್ ಫೈನಲ್ ಪಂದ್ಯ ರಾತ್ರಿ 8 ಗಂಟೆಗೆ ಆರಂಭ: ವರದಿ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ನೂತನ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ಬುಧವಾರ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ (68*) ಗಳಿಸಿದ್ದರು. ಅಲ್ಲದೆ ಕ್ವಿಂಟನ್ ಡಿ ಕಾಕ್ ಜೊತೆ ಮುರಿಯದ ಮೊದಲ ವಿಕೆಟ್‌ಗೆ ದಾಖಲೆಯ ದ್ವಿಶತಕದ (210) ಜೊತೆಯಾಟದಲ್ಲಿ ಭಾಗಿಯಾಗಿದ್ದರು. 500 @ . .# ../Pt9XaJFdBt 2018ರಲ್ಲಿ ಪಂಜಾಬ್ ಕಿಂಗ್ಸ್ ಪರ ರಾಹುಲ್ 659 ರನ್ ಗಳಿಸಿದ್ದರು. 2019ರಲ್ಲಿ 593 ರನ್ ಪೇರಿಸಿದ್ದರು. 2020ರಲ್ಲಿ 670 ರನ್ ಗಳಿಸಿ ಆರೆಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದರು. 2021ರಲ್ಲೂ 616 ರನ್ ಕಲೆ ಹಾಕಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಕೆ.ಎಲ್. ರಾಹುಲ್ ಐಪಿಎಲ್ ಸಾಧನೆ: ಪಂದ್ಯ: 108 ಇನ್ನಿಂಗ್ಸ್: 99 ಅಜೇಯ: 19 ರನ್: 3810 ಗರಿಷ್ಠ: 132 ಸರಾಸರಿ: 47.62 ಸ್ಟ್ರೈಕ್‌ರೇಟ್: 136.22 ಶತಕ: 4 ಅರ್ಧಶತಕ: 30 ಬೌಂಡರಿ: 324 ಸಿಕ್ಸರ್: 159 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.