ವಿರಾಟ್ ಕೊಹ್ಲಿ ಅವರ 973 ರನ್ ದಾಖಲೆ ಮುರಿಯುತ್ತೇನೆ: ಚಾಹಲ್ ಮುಂಬೈ: ಆರಂಭಿಕನಾಗಿ ಬ್ಯಾಟಿಂಗ್ ಮಾಡಲು ಅವಕಾಶ ದೊರಕಿದರೆ ವಿರಾಟ್ ಕೊಹ್ಲಿ ಅವರ ದಾಖಲೆ (973 ರನ್) ಮುರಿಯುತ್ತೇನೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಯಜುವೇಂದ್ರ ಚಾಹಲ್ ತಮಾಷೆಯಾಗಿ ಹೇಳಿದ್ದಾರೆ. 2016ರ ಐಪಿಎಲ್‌ನಲ್ಲಿ ಕೊಹ್ಲಿ ದಾಖಲೆಯ 973 ರನ್ ಗಳಿಸಿದ್ದರು. ಇದನ್ನೂ ಓದಿ: 2022: ಗಾಯಾಳು ರಹಾನೆ ಐಪಿಎಲ್‌ನಿಂದ ಔಟ್: ವರದಿ ಕಳೆದ ಕೆಲವು ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ಚಾಹಲ್ ಅವರನ್ನು ಪ್ರಸಕ್ತ ಸಾಲಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಖರೀದಿಸಿತ್ತು. ಆರ್‌ಸಿಬಿಯಂತೆ ರಾಜಸ್ಥಾನ್ ಆಟಗಾರರೊಂದಿಗೂ ಚಾಹಲ್ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. 'ಇಎಸ್‌ಪಿಎನ್ ಕ್ರಿಕ್‌ಇನ್ಫೋ'ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಜೋಸ್ ಬಟ್ಲರ್ ಜೊತೆಗೆ ವಿರಾಟ್ ಕೊಹ್ಲಿ ಅವರ ಕಾಲೆಳೆದಿದ್ದಾರೆ. 'ಆರಂಭಿಕನಾಗಿ ಬ್ಯಾಟಿಂಗ್ ಮಾಡಲು ನನಗೆ ಅವಕಾಶ ಸಿಕ್ಕರೆ ನಾನು ಜೋಸ್ ಬಟ್ಲರ್ ಹಾಗೂ ಪ್ರತಿಯೊಂದು ದಾಖಲೆ ಮುರಿಯುತ್ತಿದ್ದೆ. ವಿರಾಟ್ ಭಾಯ್ ಅವರ 973 ರನ್ ದಾಖಲೆಯನ್ನು 10 ಪಂದ್ಯಗಳಲ್ಲೇ ಮುರಿಯುತ್ತೇನೆ. ಏಕೆಂದರೆ ಪ್ರತಿ ಪಂದ್ಯದಲ್ಲೂ ನಾನು ಶತಕ ಗಳಿಸಬೇಕು. ಅಲ್ಲವೇ?' ಎಂದು ತಮಾಷೆಯಾಗಿ ಹೇಳಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಸಾಲಿನಲ್ಲಿ ಮುನ್ನಡೆಯಲ್ಲಿರುವ ಚಾಹಲ್, 13 ಪಂದ್ಯಗಳಲ್ಲಿ ಒಟ್ಟು 24 ವಿಕೆಟ್ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.