ಐಪಿಎಲ್‌ನಲ್ಲಿ ಸತತ 13ನೇ ವರ್ಷ ವಿರಾಟ್ ಕೊಹ್ಲಿ 300 ರನ್ ಸಾಧನೆ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಸತತ 13ನೇ ಆವೃತ್ತಿಯಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. 2010ರಿಂದ ಪ್ರಾರಂಭವಾಗಿ ಐಪಿಎಲ್ 2022ನೇ ಟೂರ್ನಿಯ ವರೆಗೂ ಎಲ್ಲ 13 ಆವೃತ್ತಿಗಳಲ್ಲೂ ಕಿಂಗ್ ಕೊಹ್ಲಿ 300ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: 2022: ಮುಂಬೈ ತಂಡಕ್ಕೆ ಬೆಂಬಲ ಸೂಚಿಸಿದ ಕೊಹ್ಲಿ, ಡುಪ್ಲೆಸಿ 2010ನೇ ಐಪಿಎಲ್ ವರ್ಷ ಕೊಹ್ಲಿ ಪಾಲಿಗೆ ಉತ್ತಮವಾಗಿರಲಿಲ್ಲ. 16 ಪಂದ್ಯಗಳಲ್ಲಿ 27.90ರ ಸರಾಸರಿಯಲ್ಲಿ 307 ರನ್ ಗಳಿಸಿದ್ದರು. ಒಂದು ಅರ್ಧಶತಕ (58) ಮಾತ್ರ ಗಳಿಸಿದ್ದರು. 2016ನೇ ಸಾಲಿನಲ್ಲಿ ಕೊಹ್ಲಿ ದಾಖಲೆಯ 973 ರನ್ ಗಳಿಸಿದ್ದರು. ಅಲ್ಲದೆ 81.08ರ ಸರಾಸರಿ ಕಾಪಾಡಿಕೊಂಡಿದ್ದರಲ್ಲದೆ ನಾಲ್ಕು ಶತಕಗಳನ್ನು ಗಳಿಸಿದ್ದರು. ಪ್ರಸಕ್ತ ಸಾಲಿನಲ್ಲಿ ಕೊಹ್ಲಿ ಇದುವರೆಗೆ ಆಡಿರುವ 14 ಪಂದ್ಯಗಳಲ್ಲಿ 23.77ರ ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಇದು ಎರಡು ಅರ್ಧಶತಕಗಳನ್ನು ಒಳಗೊಂಡಿದೆ. ಮೂರು ಬಾರಿ ಗೋಲ್ಡನ್ ಡಕ್‌ ಔಟ್ ಆಗಿದ್ದಾರೆ. ಗರಿಷ್ಠ ಸ್ಕೋರ್ 73 ಆಗಿದೆ. 2010ರಿಂದ ಐಪಿಎಲ್‌ನಲ್ಲಿ ಕೊಹ್ಲಿ ಗಳಿಸಿದ ರನ್‌‌ಗಳ ಪಟ್ಟಿ: 2010: 307 2011: 557 2012: 364 2013: 634 2014: 359 2015: 505 2016: 973 2017: 308 2018: 530 2019: 464 2020: 466 2021: 405 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.