ಐಪಿಎಲ್ ನಿಯಮ ಉಲ್ಲಂಘನೆ: ದಿನೇಶ್ ಕಾರ್ತಿಕ್‌ಗೆ ವಾಗ್ದಂಡನೆ ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್‌ಕೀಪರ್–ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಐಪಿಎಲ್ ನಿಯಮ ಉಲ್ಲಂಘನೆ ಮಾಡಿದ್ದರಿಂದ ಎಚ್ಚರಿಕೆನೀಡಲಾಗಿದೆ. ‘ಈಚೆಗೆ ನಡೆದಿದ್ದ ಎಲಿಮಿನೇಟರ್‌ ಪಂದ್ಯದಲ್ಲಿ ದಿನೇಶ್ ಅಶಿಸ್ತು ತೋರಿದ್ದಾರೆ.ಇದು ಲೆವೆಲ್ ಒನ್ ಅಪರಾಧವಾಗಿದೆ. ಪಂದ್ಯ ರೆಫರಿಯ ತೀರ್ಪು ಅಂತಿಮವಾಗಿದ್ದು,ದಿನೇಶ್ ಅವರನ್ನು ವಾಗ್ದಂಡನೆಗೊಳಪಡಿಸಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.