ಕೆಎಸ್‌ಸಿಎ | ಸುಹಾಸ್ ಶತಕ: ಬಿಟಿಸಿಸಿಗೆ ಜಯ ಬೆಂಗಳೂರು: ಸುಹಾಸ್‌ ಅಡಿಗ (ಔಟಾಗದೆ 102) ಗಳಿಸಿದ ಭರ್ಜರಿ ಶತಕದ ಬಲದಿಂದ ಬೆಂಗಳೂರು ಟೆಲಿಫೋನ್ ಕ್ರಿಕೆಟ್‌ ಕ್ಲಬ್ (ಬಿಟಿಸಿಸಿ) ತಂಡವು ತಂಡವುಕೆಎಸ್‌ಸಿಎಗುಂಪು ಎರಡರ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಜಯ ಗಳಿಸಿತು. ಇಲ್ಲಿ ನಡೆದ ಪಂದ್ಯದಲ್ಲಿಬಿಟಿಸಿಸಿ 70 ರನ್‌ಗಳಿಂದ ಬಿಇಎಲ್‌ ಸ್ಪೋರ್ಟ್ಸ್ ಕ್ಲಬ್‌ ತಂಡವನ್ನು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಬಿಟಿಸಿಸಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 169 ರನ್‌ ಗಳಿಸಿತು. 58 ಎಸೆತಗಳನ್ನು ಎದುರಿಸಿದ ಸುಹಾಸ್‌ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಿಡಿಸಿದರು. ಬಿಇಎಲ್‌ 16ನೇ ಓವರ್‌ನಲ್ಲಿ 99 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು. ಸಂಕ್ಷಿಪ್ತ ಸ್ಕೋರು ಬಿಟಿಸಿಸಿ: 20 ಓವರ್‌ಗಳಲ್ಲಿ 7ಕ್ಕೆ 169 (ಸುಹಾಸ್‌ ಅಡಿಗ ಔಟಾಗದೆ 102, ಸಯ್ಯದ್ ಮುದಸ್ಸರ್ 36; ರಘುನಂದನ್ ಎಚ್‌. 32ಕ್ಕೆ 2). ಬಿಇಎಲ್ ಸ್ಪೋರ್ಟ್ಸ್ ಕ್ಲಬ್‌: 15.3 ಓವರ್‌ಗಳಲ್ಲಿ 99 (ಮಯಂಕ್ ವಿಶ್ವಕರ್ಮ 32, ಎಂ. ಚಿತ್ತಿ ಬಾಬು 41; ಅರುಣಾ ಎಂ. 29ಕ್ಕೆ 2; ಶಾಹೀದ್ ಶರೀಫ್‌ 12ಕ್ಕ 4). ಫಲಿತಾಂಶ: ಬಿಟಿಸಿಸಿಗೆ 70 ರನ್‌ಗಳ ಜಯ. ಹಟ್ಟಿ ಗೋಲ್ಡ್ ಮೈನ್ಸ್ ಸಿಸಿ: 17 ಓವರ್‌ಗಳಲ್ಲಿ 87 (ಮೆಹಬೂಬ್ ಪಾಷಾ 26; ಭಾನುಪ್ರಕಾಶ್‌ 20ಕ್ಕೆ 2, ರಾಕೇಶ್ ಸಿಂಗ್ 27ಕ್ಕೆ 3, ಪ್ರಶಾಂತ್ ಪಿ. 2ಕ್ಕೆ 3). ರೈಲ್ವೆ ಇನ್‌ಸ್ಟಿಟ್ಯೂಟ್‌, ಕೃಷ್ಣರಾಜಪುರಂ: 18.1 ಓವರ್‌ಗಳಲ್ಲಿ 7ಕ್ಕೆ 88 (ಲಿಖಿತ್ ಕುಮಾರ್ ಎಂ. ಔಟಾಗದೆ 52; ವಡ್ಡಿ ವೇಣು 22ಕ್ಕೆ 4, ಚನ್ನಮೂರ್ತಿ 12ಕ್ಕೆ 2). ಫಲಿತಾಂಶ: ರೈಲ್ವೆ ಇನ್‌ಸ್ಟಿಟ್ಯೂಟ್‌ಗೆ ಮೂರು ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.