2nd T20| ದಕ್ಷಿಣ ಆಫ್ರಿಕಾಕ್ಕೆ 149ರನ್‌ಗಳ ಗುರಿ ನೀಡಿದ ಟೀಂ ಇಂಡಿಯಾ ಕಟಕ್ (ಒಡಿಶಾ): ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿರುವ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದೊಂದಿಗೆ 148ರನ್‌ ಗಳಿಸಿದೆ. ಟಾಸ್‌ ಸೋತರು ಮೊದಲು ಬ್ಯಾಟ್‌ ಮಾಡುವ ಅವಕಾಶ ಗಿಟ್ಟಿಸಿಕೊಂಡ ಭಾರತ ಸಾಮಾನ್ಯ ಮೊತ್ತ ಗಳಿಸಿತು. ಆರಂಭಿಕರಾದ ಋತುರಾಜ್‌ ಗಾಯಕವಾಡ್‌ ನಿರಾಶೆ ಮೂಡಿಸಿದರು. ನಂತರ, ಇಶಾನ್‌ ಕಿಶನ್‌ (34) ಮತ್ತು ಶ್ರೇಯಸ್‌ ಅಯ್ಯರ್‌ (40) ಜೋಡಿ ತಾಳ್ಮೆಯ ಇನ್ನಿಂಗ್ಸ್‌ ಕಟ್ಟಿದರು. ಬಳಿಕ ಬಂದ ರಿಷಭ್‌ ಪಂತ್‌ (5), ಹಾರ್ದಿಕ್‌ ಪಾಂಡ್ಯ (9), ಅಕ್ಷರ್‌ ಪಟೇಲ್‌ (10) ಅವರಿಂದ ಉತ್ತಮ ಆಟ ಮೂಡಿ ಬರಲಿಲ್ಲವಾದರೂ, ದಿನೇಶ್‌ ಕಾರ್ತಿಕ್‌ 30 ರನ್‌ ಸಿಡಿಸಿ ಗಮನ ಸೆಳೆದರು. ನಾಲ್ಕು ಓವರ್‌ ಮಾಡಿದರೂ, ಕೇವಲ 15ರನ್‌ ನೀಡಿದ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 1 ವಿಕೆಟ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.